ಬೆಂಗಳೂರು: ಕೊರೋನಾ ಸೋಂಕಿನಿಂದ ರಾಜ್ಯ ತತ್ತರಿಸಿದ್ದು ಚಿಕಿತ್ಸೆಗಾಗಿ ಜನಪರದಾಡುತ್ತಿದ್ದಾರೆ. ಆಸ್ಪತ್ರೆಗಳಲ್ಲೂ ಬೆಡ್‌ಗಳು ಸಿಗದೆ ಪರಿಸ್ಥಿತಿ ನಿಭಾಯಿಸಲು ಸರ್ಕಾರವೂ ಹರಸಾಹಸಪಡುತ್ತಿದೆ.
ಇದೇ ಸಂದರ್ಭದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಪ್ರಯತ್ನ ಇಡೀ ನಾಡಿನ ಗಮನಸೆಳೆದಿದೆ. ಬಸ್ಸನ್ನೇ ಆಸ್ಪತ್ರೆಯನ್ನಾಗಿಸುವ ಪರಿಕಲ್ಪನೆಯಡಿ ಕೆಎಸ್ಸಾರ್ಟಿಸಿಯು ಸಂಚಾರ ಚಿಕಿತ್ಸಾ ವಾಹನವನ್ನು ಸಿದ್ದಪಡಿಸಿದೆ. ಸುಸಜ್ಜಿತ ಆಸ್ಪತ್ರೆಯಲ್ಲಿ ರೋಗಿಯನ್ನು ಬದುಕಿಸಲು ಇರುವ ಸಕಲ ಸೌಲಭ್ಯ ಈ ವಿಶೇಷ ಬಸ್ ಆಂಬ್ಯುಲೆನ್ಸ್‌ನಲ್ಲಿದೆ.
ಈ ಸೌಲಭ್ಯ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಕರಾರಸಾ ನಿಗಮದ ಬಸ್ಸುಗಳಲ್ಲಿ ಐಸಿಯು ಆನ್ ವೀಲ್ಸ್ ಮತ್ತು ಆಕ್ಸಿಜನ್ ಆನ್ ವೀಲ್ಸ್ ಬಸ್ಸುಗಳು ಚಾಲನೆಗೊಂಡಿದೆ. ಸಕಲ ರೀತಿಯ ವೈದ್ಯಕೀಯ ಸಲಕರಣೆಗಳನ್ನೊಳಗೊಂಡು ಸಜ್ಜುಗೊಂಡಿರುವ ಈ ಬಸ್‌ಗಳು ಕೋವಿಡ್ ಸೋಂಕಿತರಿಗೆ ಜೀವ ಉಳಿಸುವ ಸಂಜೀವಿಯಂತೆ ಕೆಲಸ ಮಾಡಲಿದೆ ಎಂದಿದ್ದಾರೆ. ಈ ಬಸ್ ಕುರಿತ ವೀಡಿಯೋ ಎಲ್ಲರ ಚಿತ್ತಸೆಳೆದಿದೆ.
ಕರಾರಸಾ ನಿಗಮದ ಬಸ್ಸುಗಳಲ್ಲಿ ಐಸಿಯು ಆನ್ ವೀಲ್ಸ್ ಮತ್ತು ಆಕ್ಸಿಜನ್ ಆನ್ ವೀಲ್ಸ್ ಬಸ್ಸುಗಳು ಚಾಲನೆಗೊಂಡಿದೆ. ಸಕಲ ರೀತಿಯ ವೈದ್ಯಕೀಯ ಸಲಕರಣೆಗಳನ್ನೊಳಗೊಂಡು ಸಜ್ಜುಗೊಂಡಿರುವ ಈ ಬಸ್‌ಗಳು ಕೋವಿಡ್ ಸೋಂಕಿತರಿಗೆ ಜೀವ ಉಳಿಸುವ ಸಂಜೀವಿಯಂತೆ ಕೆಲಸ ಮಾಡಲಿದೆ.@BSYBJP @nalinkateel @BJP4Karnataka @blsanthosh pic.twitter.com/6PxMvWQ6xa
— Laxman Sangappa Savadi | ಲಕ್ಷ್ಮಣ್ ಸಂಗಪ್ಪ ಸವದಿ (@LaxmanSavadi) May 20, 2021