ಬೆಂಗಳೂರು: ರಾಜ್ಯದಲ್ಲಿ ಎದ್ದಿರುವ ಹಿಜಬ್ ವಿವಾದಕ್ಕೆ ಹೈಕೋರ್ಟ್ ತೆರೆ ಎಳೆದಿದೆ. ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿರುವ ಕರ್ನಾಟಕ ಹೈಕೋರ್ಟ್, ಶಾಲೆಗಳಲ್ಲಿ ಸರ್ಕಾರ ಸೂಚಿಸಿರುವ ವಸ್ತ್ರ ಸಂಹಿತೆಯನ್ನು ಪ್ರಶ್ನಿಸುವಂತಿಲ್ಲ ಎಂದಿದೆ. ಈ ಮೂಲಕ ಶಾಲೆಗಳಲ್ಲಿ ಹಿಜಬ್ ಧರಿಸಲು ಅವಕಾಶ ಇಲ್ಲ.
ಹಿಜಬ್ ಮುಸ್ಲಿಂ ಧರ್ಮದ ಅತ್ಯಗತ್ಯ ಭಾಗವಲ್ಲ ಎಂದೂ ಹೈಕೋರ್ಟ್ ಹೇಳಿದೆ. ಈ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಸಮವಸ್ತ್ರ ಆದೇಶವನ್ನು ಮುಖ್ಯನ್ಯಾಯಮೂರ್ತಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಎತ್ತಿಹಿಡಿದಿದ್ದು ಸಮವಸ್ತ್ರದಲ್ಲೂ ಎಲ್ಲರೂ ಒಂದೇ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ತಿ, ಕೃಷ್ಣ ಎಸ್. ದೀಕ್ಷಿತ್, ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರನ್ನೊಳಗೊಂಡ ಹೈಕೋರ್ಟ್ ಪೂರ್ಣ ಪೀಠವು ಇಂದು 129 ಪುಠಗಳ ಮಹತ್ವದ ತೀರ್ಪನ್ನು ಪ್ರಕಟಿಸಿದೆ.
ತೀರ್ಪಿನ ಪ್ರಮುಖ ಅಂಶಗಳು ಹೀಗಿವೆ:
- ಸಮವಸ್ತ್ರ ಕುರಿತ ಸರ್ಕಾರದ ಆದೇಶ ಸರಿಯಾಗಿದೆ.
- ವಸ್ತ್ರ ಸಂಹಿತೆ ಕುರಿತಸರ್ಕಾರದ ಆದೇಶ ಸಮರ್ಪಕವಾಗಿದೆ
- ಹಿಜಬ್ ಕುರಿತ ಶಾಲೆಗಳ ನಿಯಮ ಸಮರ್ಪಕ.
- ಸಮವಸ್ತ್ರ ನಿಗದಿ ಬಗ್ಗೆ ಶಾಲೆಗಳ ನಿಯಮ ಅಂತಿಮ
- ಸಮವಸ್ತ್ರ ಕಡ್ಡಾಯ ಕುರಿತ ನಿಯಮವನ್ನು ವಿದ್ಯಾರ್ಥಿಗಳು ವಿರೋಧಿಸುವಂತಿಲ್ಲ.
- ಹಿಜಾಬ್ ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಲ್ಲ.
- ಹಿಜಾಬ್ ಧರಿಸಿ ಶಾಲೆಗಳಿಗೆ ತೆರಳವುದು ಸೂಕ್ತವಲ್ಲ.
- ಶಾಲೆಗಳಲ್ಲಿ ವಿಧ್ಯಾರ್ಥಿಗಳು ಯಾವುದೇ ಧರ್ಮ ವಸ್ತ್ರ ಧರಿಸುವುದು ಸರಿಯಲ್ಲ.