ಕಾಬೂಲ್: ಯುದ್ಧ ಸಂತ್ರಸ್ತ ರಾಷ್ಟ್ರ ಎಂದು ಮತ್ತೊಮ್ಮೆ ಗುರುತಾಗಿರುವ ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕ್ರೌರ್ಯ ಮುಂದುವರಿದಿದೆ. ಮೂಲಭೂತವಾದದ ಹೆಸರಲ್ಲಿ ಹಿಂಸಿಸುತ್ತಿರುವ ತಾಲಿಬಾನ ಉಗ್ರರು ಎಲ್ಲೆಂದರಲ್ಲಿ ಗುಂಡಿಕ್ಕಿ ಜನ ಸಾಮಾನ್ಯರನ್ನು ಕೊಲ್ಲುತ್ತಿರುವ ವೀಡಿಯೋಗಳು ಬೆಚ್ಚಿ ಬೀಳಿಸುತ್ತಿವೆ.
ಈ ನಡುವೆ ಶವವನ್ನು ಹೆಲಿಕಾಪ್ಟರ್‌ಗೆ ಕಟ್ಟಿ ಆಕಾಶದಲ್ಲಿ ಹಾರಾಡಿದ ರೀತಿಯ ಪೈಶಾಚಿಕತೆಗೂ ಆಫ್ಘಾನಿಸ್ತಾನ ಸಾಕ್ಷಿಯಾಗಿದೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಶವವನ್ನು ಹೆಲಿಕಾಟ್ಟರ್‌ಗೆ ಕಟ್ಟಿ, ನೇತು ಹಾಕಿ ಊರು ತುಂಬೆಲ್ಲಾ ತಾಲಿಬಾನಿಗಳು ಸುತ್ತಾಡಿದಂತಿದೆ ಈ ವೀಡಿಯೋ.
If this is what it looks like… the Taliban hanging somebody from an American Blackhawk… I could vomit. Joe Biden is responsible.
— Liz Wheeler (@Liz_Wheeler) August 30, 2021
ಈ ಭಯಾನಕ ಸನ್ಬಿವೇಶದ ವೀಡಿಯೋ ತುಣುಕನ್ನು ಪತ್ರಕರ್ತರ ಸಮೂಹ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ತಾಲಿಬಾನಿಗಳ ಕ್ರೌರ್ಯದ ಕಥಾನಕವನ್ನು ಜಗತ್ತಿಗೆ ಅನಾವರಣ ಮಾಡಿದ್ದಾರೆ.