ಬೆಂಗಳೂರು: ರಾಜ್ಯ ಸರ್ಕಾರದ ಮ್ಹವಾಕಾಂಕ್ಷಿ ‘ಗ್ಯಾರೆಂಟಿ’ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ’ಯ ಶತಕೋಟಿ ಸಂಭ್ರಮ ಸಮಾರಂಭ ಗಮನಸೆಳೆಯಿತು. ‘ಶಕ್ತಿ’ ಯೋಜನೆಯ ಪರಿಪೂರ್ಣ ಜಾರಿಯ ಜೊತೆಯಲ್ಲೇ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿದ KSRTC ಚಾಲಕರನ್ನು ಅಭಿನಂಧಿಸಿ ಗೌರವಿಸಿದ ಸನ್ನಿವೇಶವೂ ಈ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿತು.
ರಾಜ್ಯದ ಆಡಳಿತದ ‘ಶಕ್ತಿ’ಕೇಂದ್ರ ವಿಧಾನಸೌಧದಲ್ಲಿ ಶುಕ್ರವಾರ ‘ಶಕ್ತಿ’ ಗ್ಯಾರೆಂಟಿಯ ಶತಮಾನ ಸಂಭ್ರಮ ನೆರವೇರಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಹಿತ ಮಂತ್ರಿಗಳು, ಶಾಸಕರು, ಅಧಿಕಾರಿಗಳು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ಸಾರಿಗೆ ಸಂಸ್ಥೆಗಳ (KSRTC ಸಮೂಹ) ಅಪಘಾತ ರಹಿತ ಚಾಲಕರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಅಪಘಾತ ರಹಿತ ಚಾಲಕರಿಗೆ ಚಿನ್ನದ ಪದಕ ಪ್ರದಾನ ಮಾಡಿ ಗೌರವಿಸಲಾಯಿತು.
ಏನಿದು ಚಿನ್ನದ ಪದಕದ ಪುರಸ್ಕಾರ?
ಗ್ರಾಮಾಂತರ ಸಾರಿಗೆಗಳಲ್ಲಿ 15 ವರ್ಷಗಳ ಅಪಘಾತ ಮತ್ತು ಅಪರಾಧ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಹಾಗೂ ಬೆಂಗಳೂರು ಮಹಾನಗರದಲ್ಲಿ ಅತಿ ಹೆಚ್ಚಿನ ಸಂಚಾರ ಒತ್ತಡವಿರುವ ಹಿನ್ನೆಲೆಯಲ್ಲಿ ಮತ್ತು ಭಾರಿ ವಾಹನಗಳ ಚಾಲನೆ ಕಷ್ಟದಾಯಕವಾಗಿರುವುದರಿಂದ 7 ವರ್ಷಗಳ ಅಪಘಾತ ಮತ್ತು ಅಪರಾಧ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಮುಖ್ಯ ಮಂತ್ರಿಯವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಚಿನ್ನದ ಪದಕವನ್ನು ಪ್ರದಾನ ಮಾಡಲಾಗುತ್ತಿತ್ತು. ಸ್ವತ: ಮುಖ್ಯಮಂತ್ರಿಗಳ ಅವರೇ ಚಿನ್ನದ ಪದಕವನ್ಮು ಪ್ರದಾನ ಮಾಡುವ ಪದ್ದತಿಯು ಜಾರಿಯಲ್ಲಿದೆ.
ಪ್ರಸ್ತುತ ವಿಭಾಗದ ಎಲ್ಲಾ ಅರ್ಹ ಚಾಲಕರಿಗೆ ಚಿನ್ನದ ಪದಕ ರೂ. 5000 ನಗದು ಪುರಸ್ಕಾರ ಹಾಗೂ ಪ್ರಶಂಸನಾ ಪತ್ರ ವಿತರಿಸಲಾಗುತ್ತಿದ್ದು, ಚಿನ್ನದ ಪದಕವು 8 ಗ್ರಾಂ ಚಿನ್ನ (22 ಕ್ಯಾರೆಟ್) ಹಾಗೂ 40 ಗ್ರಾಂ ಬೆಳ್ಳಿಯನ್ನು ಹೊಂದಿದೆ. ಅಲ್ಲದೆ, ಅಪಘಾತವೆಸಗದಂತೆ ಕರ್ತವ್ಯ ನಿರ್ವಹಿಸಲು ಪ್ರೋತ್ಸಾಹಿಸುವ ದೃಷ್ಠಿಯಿಂದ ಮಾಸಿಕ ರೂ. 500/-ಗಳ ಪ್ರೋತ್ಸಾಹ ಭತ್ಯೆಯನ್ನು ಸಹ ನೀಡಲಾಗುತ್ತಿದೆ.
ನಾಲ್ಕು ನಿಗಮಗಳಿಂದ ಒಟ್ಟು 83 ಚಾಲಕರಿಗೆ ಚಿನ್ನದ ಪದಕವನ್ನು ವಿತರಿಸಲಾಗುತ್ತಿದ್ದು, KSRTCಯ 27. BMTCಯ 20, NWKSRTCಯ 28, ಕಕರಸಾ ನಿಗಮದ 8 ಚಾಲಕರಿಗೆ ಈ ಪುರಸ್ಕಾರ ನೀಡಲಾಯಿತು. ಇದೇ ಸಂದರ್ಭದಲ್ಲಿ 11.06.2023ರಂದು ನಡೆದ “ಶಕ್ತಿ” ಯೋಜನೆಯ ಚಾಲನಾ ಸಮಾರಂಭ ವೇಳೆ ನಿಗಮದ ಬಸ್ಸಿನ ಮೆಟ್ಟಲಿಗೆ ನಮಸ್ಕರಿಸಿ ಬಸ್ಸು ಹತ್ತಿ ಸಾರ್ವಜನಿಕರ ಗಮನ ಸೆಳದಿದ್ದ ನಿಂಗವ್ವ ಶಿಂಗಾಡಿ ಯವರನ್ನು ಮುಖ್ಯಮಂತ್ರಿಗಳು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ದಿನಾಂಕ: 11.06.2023 ರಂದು ನಡೆದ “ಶಕ್ತಿ” ಯೋಜನೆಯ ಚಾಲನಾ ಸಮಾರಂಭದಂದು ನಿಗಮದ ಬಸ್ಸಿನ ಮೆಟ್ಟಲಿಗೆ ನಮಸ್ಕರಿಸಿ ಬಸ್ಸು ಹತ್ತಿ ಸಾರ್ವಜನಿಕರ ಗಮನ ಸೆಳದಿದ್ದ ಶ್ರೀಮತಿ ನಿಂಗವ್ವ ಶಿಂಗಾಡಿ ರವರನ್ನು ಸನ್ಮಾನ್ಯ ಮುಖ್ಯಮಂತ್ರಿಗಳು ಸನ್ಮಾನಿಸಿ ಗೌರವಿಸಿದರು. pic.twitter.com/vrMqIfr5H3
— KSRTC (@KSRTC_Journeys) November 24, 2023