ಅಡುಗೆ ಅನಿಲ ಬಳಕೆದಾರರಾಗಿದ್ದಲ್ಲಿ, ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಗ್ರಾಹಕರಾಗಿದ್ದಲ್ಲಿ ನಿಮಗಿದು ಉಪಯುಕ್ತ ಮಾಹಿತಿ. ಈ ವರೆಗೂ ಫೋನ್ ಕನೆಕ್ಟ್ ಆಗುತ್ತಿಲ್ಲ, ಇನ್ಯಾವುದೋ ನಂಬರ್‌ಗೆ ಡಯಲ್ ಆಗಿ ಗ್ಯಾಸ್ ಸಿಲಿಂಡರ್ ಬರುತ್ತಲೇ ಇಲ್ಲ ಎಂಬ ಚಿಂತೆ ದೂರವಾಗಲಿದೆ. ಅಂದರೆ ಇನ್ನು ಮುಂದೆ ವಾಟ್ಸಪ್ ಮೂಲಕವೂ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದಾಗಿದೆ.
ಗ್ರಾಹಕರು ತಮ್ಮ LPG ಗ್ಯಾಸ್ ಸಿಲಿಂಡರ್ ಬೇಕಾದರೆ ಕಂಪನಿಯ ವಾಟ್ಸ್ಯಾಪ್ ಸಂಖ್ಯೆಯಲ್ಲಿ ಸಂದೇಶ ಕಳುಹಿಸಿದಲ್ಲಿ ರೀಫಿಲ್ ಸಿಲಿಂಡರ್ ಮನೆ ಸೇರಲಿದೆಯಂತೆ.
ಇಲ್ಲಿದೆ ವಾಟ್ಸಪ್ ನಂಬರ್..
HP ಗ್ಯಾಸ್ : 9222201122 ಸಂಖ್ಯೆಗೆ ಬುಕ್ ಎಂದು ಸಂದೇಶ ಕಳುಹಿಸಬೇಕು.
ಭಾರತ್ ಗ್ಯಾಸ್ : 1800224344 ಸಂಖ್ಯೆಗೆ ಬುಕ್ ಅಥವಾ 1 ಎಂದು ಸಂದೇಶ ರವಾನಿಸಬೇಕು.
ಇಂಡೇನ್ : 7588888824 ಸಂಖ್ಯೆಗೆ REFILL ಎಂದು ಸಂದೇಶ ಕಳುಹಿಸಬೇಕು.
ಗಮನಿಸಬೇಕಾದ ಸಂಗತಿ ಏನೆಂದರೆ, ಗ್ರಾಹಕರು ತಾವು ನೋಂದಾಯಿಸಿರುವ ಮೊಬೈಲ್ ಸಂಖ್ಯೆಯಿಂದಲೇ ಈ ಸಂದೇಶವನ್ನು ಕಳುಹಿಸಬೇಕಾಗುತ್ತದೆ. ಸಿಲಿಂಡರ್ ಪಡೆಯಲಷ್ಟೇ ಅಲ್ಲ, ಕೆಲವು ಸಂಸ್ಥೆಯ ಗ್ರಾಹಕರಿಗೆ
LPG I’d, ಸಿಲಿಂಡರ್ ಕೋಟಾ, ಐಡಿ, ಸಬ್ಸಿಡಿ ವಿವರಗಳೂ ಲಬ್ಯವಾಗಲಿದೆ.