ಗದಗ್: ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಸಾರ್ವಜನಿಕರು ಸಿಡಿದೆದ್ದಿದ್ದಾರೆ. ಘಟನ ಖಂಡಿಸಿ ನರಗುಂದದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಎಬಿವಿಪಿ ಸಂಘಟನೆ ಮತ್ತು ಪಂಚಗೃಹ ಹಿರೇಮಠದ ಸಿದ್ದಲಿಂಗ ಶ್ರೀಗಳು ಹಾಗೂ ವಿರಕ್ತಮಠದ ಶಿವಕುಮಾರ ಸ್ವಾಮಿಗಳು ನೇತೃತ್ವದಲ್ಲಿ ನಡೆದ ಪ್ರತಿಭಟನಾ ರ‌್ಯಾಲಿಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಆಟೋ ಚಾಲಕರ ಒಕ್ಕೂಟ ಸಹ ಪ್ರತಿಭಟನೆಗೆ ಸಾಥ್ ನೀಡಿದ್ದರು
ಪಟ್ಟಣದ ಉಡಚಮ್ಮ ದೇವಿ ದೇವಸ್ಥಾನ ದಿಂದ ಶಿವಾಜಿ ವೃತ್ತದವರಿಗೆ ನಡೆದ ಪ್ರತಿಭಟನಾ ರ‌್ಯಾಲಿಯಲ್ಲಿ ಕಾಮುಕ ಆರೋಪಿ ಸದ್ದಾಂ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ಸದ್ಧಾಂ ಪ್ರತಿಕೃತಿಗೆ ಬೆಂಕಿ ಹಚ್ಚಿ ಕಾಮುಕ ಆರೋಪಿ ವಿರುದ್ಧ ಜನ್ರು ಆಕ್ರೋಶ ಹೊರಹಾಕಿದ್ದಾರೆ. ನರಗುಂದ ಪಟ್ಟಣದ 15 ವರ್ಷದ ಬಾಲಕಿ ಮಧು ಹುಲಿಸ್ಯಾರ ಎಂಬ ಅಪ್ರಾಪ್ತ ಬಾಲಕಿಯನ್ನ ದುಷ್ಕರ್ಮಿ ಸದ್ಧಾಂ ಅನ್ನುವಾತ ಅಪಹರಿಸಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ.
ಗದಗ ನಲ್ಲಿಯೂ ಸಹ ಎಬಿವಿಪಿ ಸಂಘಟನೆ ನೇತೃತ್ವದಲ್ಲಿ ನೂರಾರು ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸರಿಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದರು. ನಂತರ ತೋಂಟದಾರ್ಯ ಮಠದ ಎದುರು ಸುಡುಬಿಸಿಲನ್ನೂ ಲೆಕ್ಕಿಸದೇ ರಸ್ತೆ ನಡೆಸಿದ ವಿದ್ಯಾರ್ಥಿವೃಂದ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಮನವಿ ಸಲ್ಲಿಸಿದರು.