ಚಿತ್ರದುರ್ಗ: ಕೋಟಿಗೊಬ್ಬ ಸಿನಿಮಾ ಕಿರಿಕ್ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ-3 ಸಿನಿಮಾದ ನಿರ್ಮಾಪಕ ಸೂರಪ್ಪ ಬಾಬು ವಿರುದ್ದ ಚಿತ್ರದುರ್ಗದಲ್ಲಿ ಎಫ್ಐಆರ್ ದಾಖಲಾಗಿದೆ. ವಿತರಕ ಖಾಝಾಪೀರ್ ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆ.14ರಂದು ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಚಿತ್ರದ ರಿಲೀಸ್ಗೆ ಅಡ್ಡಿಯಾಗಿತ್ತು. ಈ ವಿಚಾರದಲ್ಲಿ ವಿತರಕರು ಹಾಗೂ ಚಿತ್ರತಂಡದ ನಡುವೆ ಮುಸುಕಿನ ಗುದ್ದಾಟ ನಡೆದಿದೆ.
ಇದರ ಬೆನ್ನಲ್ಲೇ ಚಿತ್ರದುರ್ಗದ ವಿತರಕ ಖಾಜಾಪೀರ್ ಅವರು ಸೂರಪ್ಪ ಬಾಬು ವಿರುದ್ಧ ಕೊಲೆ ಬೆದರಿಕೆ ಆರೋಪ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ಒಪ್ಪಂದದ ವಿಚಾರದಲ್ಲಿ ತಕರಾರು ಉಂಟಾದ ಹಿನ್ನೆಲೆಯಲ್ಲಿ ಹಣ ವಾಪಸ್ ಕೇಳಿದ್ದ ತಮಗೆ ನಿರ್ಮಾಪಕ ಸೂರಪ್ಪ ಬಾಬು ಅವರು ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆಂದು ವಿತರಕ ಖಾಝಾಪೀರ್ ಆರೋಪಿಸಿದ್ದಾರೆ. ಈ ಕುರಿಂತೆ ಚಿತ್ರದುರ್ಗ ನಗರ ಪೊಲೀಸ್ ಠಾಣೆಗೆ ಖಾಝಾಪೀರ್ ಅವರು ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.