ಅಹಮದಾಬಾದ್: ಗುಜರಾತ್ ಚುನಾವಣೆಯಲ್ಲಿ ಮೋದಿ ಮೋಡಿ ಮತ್ತೆ ಗಮನಸೆಳೆದಿದೆ. ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮುಗಿಯುತ್ತಿದ್ದಂತೆಯೇ ಮತದಾನೋತ್ತರ ಸಮೀಕ್ಷಾ ಫಲಿತಾಂಶ ಬಹಿರಂಗವಾಗಿದ್ದು, ಈ ಬಾರಿ ಮತ್ತೆ ಬಿಜೆಪಿಯೇ ಮೇಲುಗೈ ಸಾಧಿಸುವ ಸಾಧ್ಯತೆ ವ್ಯಕ್ತವಾಗಿದೆ. ಮತ್ತೆ ಬಿಜೆಪಿ ಸರ್ಕಾರವೇ ಆಧಿಕಾರಕ್ಕೆ ಬರವಿವೆ ಎಂದು ಈ ಸಮೀಕ್ಷೆಗಳು ಹೇಳಿವೆ.
ಮೋದಿ ತವರಿನಲ್ಲಿ ಬಿಜೆಪಿಯನ್ನು ಸೋಲಿಸುವುದಾಗಿ ಕಾಂಗ್ರೆಸ್ ಪಣ ತೊಟ್ಟಿತ್ತು. ಆದರೆ ಕಳೆದ ಅವರಿಗಿಂತ ಹಲವು ಸ್ಥಾನಗಳು ‘ಕೈ’ ಯಿಂದ ತಪ್ಪಲಿವೆ. ಬಿಜೆಪಿಯನ್ನು ಮಣಿಸಲು ಆಮ್ ಆದ್ಮಿ ಪಕ್ಷ ಭರ್ಜರಿ ಭರವಸೆಗಳೊಂದಿಗೆ ಅಖಾಡಕ್ಕಿಳಿದಿದ್ದು ಆಪ್ ಕೂಡಾ 10ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಅಸಾಧ್ಯವೆನಿಸಿದೆ ಎಂಬುದು ಎಕ್ಸಿಟ್ ಪೋಲ್ ಲೆಕ್ಕಾಚಾರ.
ಎಕ್ಸಿಟ್ ಪೋಲ್ ಫಲಿತಾಂಶ ಹೀಗಿದೆ:
-
ಬಿಜೆಪಿ – 128-148
-
ಕಾಂಗ್ರೆಸ್ – 30-42
-
ಆಮ್ ಆದ್ಮಿ – 02-10
























































