ಕೋಟ : ಕೋಟ ಸಮೀಪ ದಲ್ಲಿರುವ ಇಸಿಆರ್ (ECR GROUP of Institutions) ಕಾಲೇಜಿನಲ್ಲಿ ಓಣಂ ಆಚರಣೆ ಗಮನಸೆಳೆಯಿತು. ಯುವ ಜನರ ಉತ್ಸಾಹವು ಸಡಗರ ಸಂಭ್ರಮಕ್ಕೆ ಸಾಕ್ಷಿಯಾಯಿತು.
ವಿದ್ಯಾರ್ಥಿಗಳು, ಉಪನ್ಯಾಸಕರು ಭರ್ಜರಿ ಡ್ಯಾನ್ಸ್ ಮಾಡಿ ಓಣಂ ಹಬ್ಬದ ಸಾಗರವನ್ನು ಹೆಚ್ಚಿಸಿದರು. ಕೇರಳದ ವಿದ್ಯಾರ್ಥಿಗಳಿಂದಲೇ ತುಂಬಿರುವ ಕಾಲೇಜಿನಲ್ಲಿ ಮಕ್ಕಳ ಜೊತೆ ಉಪನ್ಯಾಸಕರೂ, ಕಾಲೇಜು ಸಿಬ್ಬಂದಿ ಕೂಡಾ ನೃತ್ಯ ಮಾಡಿ ಸಂತಸದಲ್ಲಿ ಭಾಗಿಯಾದರು.
ಈ ನಡುವೆ, ಕೊರೊನಾ ಸೋಂಕಿನ ಆತಂಕದ ಸಂದರ್ಭದಲ್ಲಿ ಈ ರೀತಿಯ ಸಮಾರಂಭ ಅಗತ್ಯವಿತ್ತೇ ಎಂಬ ಮಾತುಗಳೂ ಸಾರ್ವಜನಿಕವಲಯದಲ್ಲಿ ಕೇಳಿಬಂದಿದೆ.