ಬೆಂಗಳೂರು: ಚನ್ನಪಟ್ಟಣದಲ್ಲಿ ಕರ್ತವ್ಯನಿರತ ಪಶುವೈದ್ಯಾಧಿಕಾರಿಯಾದ ಗಿರೀಶ್ ಮೇಲೆ ಹಲ್ಲೆಯನ್ನು ನಡೆಸಿರುವುದು ಖಂಡನೀಯ. ರಾಜ್ಯದಲ್ಲಿ ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ವೈದ್ಯರಂತೆ, ಪಶುವೈದ್ಯರನ್ನೂ ಕಾನೂನಿನ ಅಡಿಯಲ್ಲಿ ರಕ್ಷಣೆ ನೀಡುವಂತೆ ಕರ್ನಾಟಕ ರಾಜ್ಯ ಪಶುವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರಾದ ಎಸ್.ಸಿ ಸುರೇಶ್ ಆಗ್ರಹಿಸಿದ್ದಾರೆ.
ಜಾರಿಯಾಗಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಸಂಧರ್ಭದಲ್ಲಿ ಅನೇಕ ಪಶುವೈದ್ಯರಿಗೆ ಜೀವಭಯವಿದ್ದು ಇತ್ತೀಚೆಗೆ ಹಲ್ಲೆಯೂ ಸಹ ನಡೆದಿರುತ್ತದೆ. ಅದರಲ್ಲೂ ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆದಿರುವುದು ನಿಜವಾಗಿಯೂ ವಿಷಾಧನೀಯ. ಇದನ್ನು ಕರ್ನಾಟಕ ಪಶುವೈದ್ಯಕೀಯ ಸಂಘವು ಉಗ್ರವಾಗಿ ಖಂಡಿಸುತ್ತದೆ. ಈ ಕಾಯಿದೆಯನ್ನು ರೂಪಿಸುವಾಗ ಇಲಾಖೆಯ ಅಧಿಕಾರಿಗಳು ತಾಂತ್ರಿಕ ಮಾಹಿತಿಯನ್ನು ನೀಡಿರುವುದು ಮಾತ್ರ ಪಶುವೈದ್ಯರ ಕರ್ತವ್ಯವಾಗಿರುತ್ತದೆ. ಉಳಿದಂತೆ ವಾಣಿಜ್ಯ ಮಳಿಗೆ/ಉದ್ಯಮವನ್ನು ತಡೆಯುವ/ಮುಚ್ಚಿಸುವ ಕರ್ತವ್ಯವು ಆರಕ್ಷಕ ಇಲಾಖೆಗೆ ಸೇರಿದ್ದಾಗಿತ್ತದೆ. ಆದುದರಿಂದ ಗೋ ಹತ್ಯೆ ನಿಷೇಧ ಕಾಯಿದೆಯನ್ನು ಜಾರಿ ಮಾಡುವ ಸಂಧರ್ಭದಲ್ಲಿ ಪಶುವೈದ್ಯರ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಸ್ಪಷ್ಟವಾಗಿ ನಮೂದಿಸಿ ವಿಶೇಷ ಕಾನೂನ್ನು ರೂಪಿಸಬೇಕು ಎಂದು ಸಂಘವು ಒತ್ತಾಯಿಸುತ್ತದೆ. ಜೊತೆಗೆ ಈ ಹಿಂದೆಯೂ ಪಶುವೈದ್ಯರ ಮೇಲೆ ಅನೇಕ ಕಡೆ ಬೇರೆ ಬೇರೆ ಕಾರಣಗಳಿಗಾಗಿ ಹಲ್ಲೆ ನಡೆದಿದೆ. ಇದನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಪಶುವೈದ್ಯರ ಮೇಲೆ ಹಲ್ಲೆ ನಡೆದ ಸಂಧರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿರುವಂತೆ ಅಫರಾಧಿಗಳನ್ನು ಬಂಧಿಸಲು/ಶಿಕ್ಷಿಸಲು ಉಗ್ರಕಾನೂನು ರೂಪಿಸಬೇಕು ಅಥವಾ ವೈದ್ಯರ ರಕ್ಷಣೆಯ ಕಾನೂನಿನ ಅಡಿಯಲ್ಲಿ ಪಶುವೈದ್ಯರನ್ನು ಪರಿಗಣಿಸುವಂತೆ ಒತ್ತಾಯಿಸುತ್ತದೆ ಎಂದವರು ಹೇಳಿದ್ದಾರೆ.
ಡಾ|| ಗಿರೀಶ್ ಅವರ ಮೇಲೆ ನಡೆದಿರುವ ಹಲ್ಲೆಯಲ್ಲಿ ಭಾಗಿಯಾಗಿರುವ ಎಲ್ಲಾ ದುಷ್ಕರ್ಮಿಗಳನ್ನು ಈ ಕೂಡಲೇ ಬಂಧಿಸಿ ಉಗ್ರಶಿಕ್ಷೆ ವಿಧಿಸಲು ಸಂಘವು ಆಗ್ರಹಿಸುತ್ತದೆ. ಗೋಹತ್ಯೆ ನಿಷೇಧ ಕಾಯಿದೆಯನ್ನಜಾರಿಗೊಳಿಸುವ ಸಂಬಂಧ ಪಶುವೈದ್ಯರ ನಿಖರವಾದ ಜವಾಬ್ದಾರಿಗಳನ್ನು ಸರ್ಕಾರ ರೂಪಿಸಬೇಕು.ಹಾಗೂ ಹಲ್ಲೆ ನಡೆಸಿದವರನ್ನು ಈ ಕೂಡಲೇ ಬಂಡಿಸ ಬೇಕುಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು. ಹಾಗೂ ಅಲ್ಲಿಯವರೆಗೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವ ಪ್ರಕ್ರಿಯೆ ಯಲ್ಲಿ ಪಶುವೈದ್ಯರು ಪಾಲ್ಗೊಳ್ಳುವುದಿಲ್ಲವೆಂದು ಸಂಘ ತೀರ್ಮಾನಿಸಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಡಾ|| ಶಿವರಾಮ್ ಎ.ಡಿ ಹೇಳಿದ್ದಾರೆ*

























































