ವಾಷಿಂಗ್ಟನ್: ವಿಶ್ವದ ದೈತ್ಯ ರಾಷ್ಟ್ರ ಅಮೆರಿಕವನ್ನು ಮುನ್ನಡೆಸಿದ್ದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರೀಗ ಕಂಬಿಯ ಹಿಂದೆ ಸೇರಿದ್ದಾರೆ. 2020ರ ಜಾರ್ಜಿಯಾ ಚುನಾವಣಾ ಫಲಿತಾಂಶಗಳನ್ನು ತಿರುಚಲು ಯತ್ನಿಸಿದ ಆರೋಪದಲ್ಲಿ ಡೋನಾಲ್ಡ್ ಟ್ರಂಪ್ ಅವರು ಬಂಧನಕ್ಕೊಳಗಾಗಿದ್ದಾರೆ.
2020ರಲ್ಲಿ ದಕ್ಷಿಣ ರಾಜ್ಯಗಳಲ್ಲಿ ನಡೆದ ಚುನಾವಣಾ ಫಲಿತಾಂಶವನ್ನು ತಿರುಚಲು ಪ್ರಯತ್ನಿಸಿದ್ದ ಆರೋಪ ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮೇಲಿದೆ. ಚುನಾವಣಾ ವಂಚನೆ ಮತ್ತು ಪಿತೂರಿ ಸಹಿತ ಇವರ ಮೇಲೆ 12 ಪ್ರಕರಣಗಳನ್ನು ದಾಖಲಿಸಲಾಗಿದೆ.
ಜಾರ್ಜಿಯಾ ಜೈಲಿನಲ್ಲಿ ಶರಣಾದ ಡೋನಾಲ್ಡ್ ಟ್ರಂಪ್ ಅವರು ತನಿಖಾ ಪ್ರಕ್ರಿಯೆಯ ನಂತರ ಬಿಡುಗಡೆಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.




















































































