ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲಾ ದೊಡ್ಡಬಳ್ಳಾಪುರ ಭಾನುವಾರ ಬೆಳ್ಳಂಬೆಳಿಗ್ಗೆ ಬೆಚ್ಚಿಬಿದ್ದಿದೆ. ಹುಚ್ಚು ನಾಯಿ ಸಿಕ್ಕ ಸಿಕ್ಕವರಿಗೆ ಕಚ್ಚಿ ಆತಂಕ ಸೃಷ್ಟಿಸಿತು.
ದೊಡ್ಡಬಳ್ಳಾಪುರ ಸಮೀಪದ ತಪಸೀಹಳ್ಳಿ ಬಳಿ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಎರಡು ಹಸು ಹಾಗೂ ನಾಲ್ವರಿಗೆ ಹುಚ್ಚು ನಾಯಿ ಕಚ್ಚಿದೆ. ಹುಚ್ಚು ನಾಯಿ ಕಡಿತದಿಂದ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ತಪಸೀಹಳ್ಳಿ ಗೇಟ್ ಹಾಗೂ ತಪಸೀಹಳ್ಳಿ ಗ್ರಾಮದಲ್ಲಿದ್ದ ಹಸುಗಳು ಹಾಗೂ ಜನರ ಮೇಲೆ ಹುಚ್ಚು ನಾಯಿ ದಾಳಿ ಮಾಡಿದ ಸುದ್ದಿ ಹರಡುತ್ತಿದ್ದಂತೆಯೇ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.


























































