ದೊಡ್ಡಬಳ್ಳಾಪುರ : ವಿದ್ಯಾಭ್ಯಾಸದಲ್ಲಿ ಟಾಫರ್. ಹಾಗೆಯೇ ಯೋಗಾಸದಲ್ಲೂ ಯೋಗ ಭಾರತ ರತ್ನ. ಯೋಗ ಕ್ಷೇತ್ರದಲ್ಲಿ ಸಾಧನೆಯ ಹಾದಿಯಲ್ಲಿರುವ ಯುವತಿ ಹಲವು ಪ್ರಶಸ್ತಿಗಳನ್ನು ಮೂಡಿಗೇರಿಸಿಕೊಂಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಅರಹಳ್ಳಿ ಗುಡ್ಡದಹಳ್ಳಿಯ ರೈತ ಕುಟುಂಬದ ಕುವರಿ ವಿನುತಾಗೌಡ ಯೋಗ ಕ್ಷೇತ್ರದಲ್ಲಿ ಸಾಧಿಸಬೇಕೆನ್ನುವ ಛಲದಲ್ಲಿದ್ದಾರೆ. ಆಶಾ ಮತ್ತು ನಂಜೇಗೌಡ ದಂಪತಿಯ ಹಿರಿಯ ಮಗಳು ವಿನುತಾ, ಸದ್ಯ ಯಲಹಂಕದ ನಾಗಾರಾರ್ಜುನ ಕಾಲೇಜ್ನ ದ್ವೀತಿಯ ಪಿಯುಸಿ ವಿದ್ಯಾರ್ಥಿನಿ. ವಿದ್ಯಾಭ್ಯಾಸದಲ್ಲಿ ಶಾಲೆಗೆ ಟಾಫರ್ ಆಗಿರುವ ವಿನುತಾ ಎಸ್ಸೆಸ್ಸೆಲ್ಸಿಯಲ್ಲಿ ಶೇಕಡಾ 99ರಷ್ಟು ಅಂಕ ಗಳಿಸಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಕಾಲೇಜ್’ಗೆ ಟಾಫರ್ ಆಗುವ ಹಾದಿಯಲ್ಲಿದ್ದು ಕಠಿಣ ಪರಿಶ್ರಮ ಪಡುತ್ತಿದ್ದಾರೆ.
ವಿದ್ಯೆಗೂ ಸೈ ಯೋಗಕ್ಕೂ ಸೈ ಅನ್ನುವ ವಿನುತಾ, ಯೋಗ ಕ್ಷೇತ್ರದಲ್ಲೂ ಸಾಧನೆಯ ಹಾದಿಯಲ್ಲಿದ್ದಾರೆ, ಕಲಿಕೆಯಲ್ಲಿ ಏಕಾಗ್ರತೆ ಬರುವ ಕಾರಣಕ್ಕೆ ಯೋಗ ತರಗತಿ ಸೇರಿದ ವಿನುತ ಯೋಗ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ. ದೇಹವನ್ನು ಲೀಲಾಜಾಲವಾಗಿ ಬಾಗಿಸುವ ಮೂಲಕ ವಿವಿಧ ಯೋಗಭಂಗಿಗಳನ್ನ ಮಾಡುತ್ತಾರೆ. ಹಲವು ಸ್ವರ್ಥೆಗಳಲ್ಲಿ ಯೋಗ ಪ್ರದರ್ಶನ ನೀಡಿರುವ ವಿನುತ ಯೋಗ ಭಾರತರತ್ನ, ಯೋಗ ಕಲಾ ಚಂದ್ರ, ಯೋಗ ಚಂದ್ರ, ಯೋಗಾರ್ಜುನ, ಯೋಗ ಸಾರ್ಮಾಟ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಎರಡು ಬಾರಿ ಗ್ಲೋಬಲ್ ಟೈಟಲ್ ಯೋಗ ಚಾಂಪಿಯನ್ಶಿಪ್ನಲ್ಲಿ ಸಿಲ್ವರ್ ಪದಕ ಗಳಿಸಿದ್ದಾರೆ.
ಯೋಗ ಕ್ಷೇತ್ರದಲ್ಲಿನ ಮಗಳ ಸಾಧನೆಯಿಂದ ಸಂತಸದಲ್ಲಿದ್ದಾರೆ ವಿನುತ ತಾಯಿ ಆಶಾ. ಮಗಳ ಯೋಗ ಕಲಿಕೆಯಿಂದ ನಾನು ಸಹ ಮನೆಯಲ್ಲಿ ಯೋಗಾಸನ ಮಾಡುತ್ತೆನೆ. ಇದರಿಂದ ನನ್ನ ಆರೋಗ್ಯದಲ್ಲೂ ಬದಲಾವಣೆ ಕಂಡು ಕೊಂಡಿದ್ದೆನೆಂದು ಅವರು ಹೇಳುತ್ತಾರೆ. ಯೋಗಾಸನದಲ್ಲಿ ಸಾಧನೆ ಮಾಡಿ ಮುಂದೆ ಯೋಗ ಶಿಕ್ಷಕಿಯಾಗುವ ಮೂಲಕ ಯೋಗದ ಮಹತ್ವವನ್ನು ಜನರಿಗೆ ತಿಳಿಸುವ ಆಸೆ ಹೊಂದಿದ್ದಾರಂತೆ.