ದೊಡ್ಡಬಳ್ಳಾಪುರ:-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಖ್ಯಾತ ನಟ ಕಿಚ್ಚ ಸುದೀಪ್ ಅವರು ಮತಬೇಟೆಗೆ ಇಳಿದಿದ್ದಾರೆ.
ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜ್ ಕೈ ಬಲಪಡಿಸಲು ನಟ ಕಿಚ್ಚ ಸುದೀಪ್ ಭರ್ಜರಿ ರೋಡ್ ಶೋ ನಡೆಸಿದರು. ನಗರದ ಶ್ರೀ ಮುತ್ಯಾಲಮ್ಮ ದೇವಾಲಯದ ಮುಂಭಾಗದಿಂದ ರೋಡ್ ಶೋ ಆರಂಭ ಮಾಡಿದರು. ಡಾ.ಕೆ.ಸುಧಾಕರ್ ಇದ್ದರು.
ದೊಡ್ಡಬಳ್ಳಾಪುರದ ಪ್ರಮುಖ ಪ್ರದೇಶಗಳಲ್ಲಿ ರೋಡ್ ಶೋ ಸಾಗಿದ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.