ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥನ ಕ್ಷೇತ್ರದ ಪುನರುಜ್ಜೀವನಕ್ಕಾಗಿ ಕೈಗೊಂಡ ನಿರ್ಣಯವು ಕಾಶಿ ವಿಶ್ವನಾಥ ಧಾಮದ ರೂಪ ಪಡೆದಿದ್ದು, ಅದು ಡಿಸೆಂಬರ್ 13 ರಂದು ಉದ್ಘಾಟನೆಗೊಳ್ಳಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನ ಪರಿಷತ್ ಸದಸ್ಯರೂ ಆದ ಎನ್.ರವಿಕುಮಾರ್ ಅವರು ತಿಳಿಸಿದ್ದಾರೆ.
ಭಗವಾನ್ ಶಿವನ ಹನ್ನೆರಡು ಜ್ಯೋತಿಲಿರ್ಂಗಗಳಲ್ಲಿ, ಒಂದೆನಿಸಿದ ಪುರಾತನವಾದ ಕಾಶಿ ವಿಶ್ವನಾಥ ಧಾಮದ ಅಭಿವೃದ್ಧಿ ಮತ್ತು ಸುಂದರೀಕರಣದ ಅದ್ಭುತ ಕೆಲಸಗಳು ನಡೆದಿದ್ದು, ಈ ನವೀಕೃತ ಧಾರ್ಮಿಕ ನಗರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಜಿ ಅವರು ಇದೇ ಡಿಸೆಂಬರ್ 13 ರಂದು ಉದ್ಘಾಟಿಸಲಿದ್ದಾರೆ. ಇದು ನಮಗೆಲ್ಲರಿಗೂ ಅತ್ಯಂತ ಸಂತೋಷ, ತೃಪ್ತಿ ಮತ್ತು ಹೆಮ್ಮೆ ತರುವ ಬಹಳ ಮುಖ್ಯ ವಿಷಯವಾಗಿದೆ. ಧರ್ಮಾಚಾರ್ಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಭಕ್ತರು, ಸಾಧು-ಸಂತರು, ಬುದ್ಧಿಜೀವಿಗಳು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಉತ್ತರ ಪ್ರದೇಶದ ಮುಖ್ಯಮಂತ್ರಿ, ಕೇಂದ್ರ ಸಚಿವರು ಮತ್ತು ಸಚಿವರು ಕಾಶಿಯಲ್ಲಿ ನಡೆಯುವ ಈ ಮಹಾಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ವಿಶಿಷ್ಟತೆಯನ್ನು ಪಡೆದಿದ್ದು, ಭಾರತೀಯ ಸಂಸ್ಕೃತಿಯ ಸಾಮರಸ್ಯ, ಸಮಗ್ರತೆ ಮತ್ತು ಏಕತೆಯ ಸಂಕೇತವಾಗಿರುತ್ತದೆ ಎಂದು ವಿವರಿಸಿದರು.
ಈ ಐತಿಹಾಸಿಕ ಮತ್ತು ಅಭೂತಪೂರ್ವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ ಅವರು ಪಕ್ಷದ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚಿಸಿದ್ದಾರೆ. ಈ ಕಾರ್ಯಕ್ರಮಗಳು ಒಂದು ತಿಂಗಳ ಕಾಲ ದೇಶದಾದ್ಯಂತ ನಡೆಯಲಿವೆ. ಅವು 13ನೇ ಡಿಸೆಂಬರ್ 2021ರಿಂದ ಪ್ರಾರಂಭವಾಗುತ್ತದೆ ಮತ್ತು ಮಕರ ಸಂಕ್ರಾಂತಿ ಅಂದರೆ 14ನೇ ಜನವರಿ 2021 ವರೆಗೆ ಮುಂದುವರಿಯುತ್ತದೆ. ಪಕ್ಷದ ಎಲ್ಲಾ ಜನ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿವೆ ಎಂದರು.
ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ, ಬೃಹತ್ ಮತ್ತು ಅದ್ಧೂರಿ ಕಾರ್ಯಕ್ರಮ ಇರಲಿದ್ದು, ದೇವಸ್ಥಾನ, ಮಠ, ಆಶ್ರಮ ಅಥವಾ ಇತರ ಧಾರ್ಮಿಕ ಸ್ಥಳದಲ್ಲಿ ಪಕ್ಷದ ಜಿಲ್ಲಾ ಘಟಕವು ಇದನ್ನು ಆಯೋಜಿಸಲಿದೆ. ಇದರಲ್ಲಿ ಸಂತರು, ಸ್ವಾಮೀಜಿಗಳು, ಧಾರ್ಮಿಕ ಮುಖಂಡರು, ಬುದ್ಧಿಜೀವಿಗಳು, ಮಾತ್ರವಲ್ಲದೆ, ಪಕ್ಷದ ಹಾಗೂ ಪಕ್ಷದ ಜನ ಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸುವರು. ಈ ಕಾರ್ಯಕ್ರಮದಲ್ಲಿ ‘ದಿವ್ಯ ಕಾಶಿಭವ್ಯ ಕಾಶಿ’ ಕುರಿತು ಮಾಹಿತಿಯನ್ನೂ ನೀಡಲಾಗುವುದು. ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಧಾರ್ಮಿಕ ಮುಖಂಡರು ಮತ್ತು ಸಂತರನ್ನು ಪಕ್ಷದಿಂದ ಸನ್ಮಾನಿಸಲಾಗುವುದು ಎಂದರು.
13ರ ಕಾರ್ಯಕ್ರಮದಲ್ಲಿ ಜನ ಪ್ರತಿನಿಧಿಗಳು, ಶಾಸಕರು, ಸಂಸದರು/ಸಚಿವರು ಮತ್ತು ಮುಖ್ಯಮಂತ್ರಿಗಳು, ಪಕ್ಷದ ಸಚಿವರು/ಉಪಮುಖ್ಯಮಂತ್ರಿಗಳು ಭಾಗವಹಿಸುತ್ತಾರೆ. ಕಾಶಿ ವಿಶ್ವನಾಥ ಧಾಮ್ ಉದ್ಘಾಟನೆಯ ಸಂದರ್ಭದಲ್ಲಿ ರಾಜ್ಯದ ಜನರು ಶಿವನನ್ನು ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಪೂಜಿಸುತ್ತಾರೆ. ಬಿಜೆಪಿ ಪ್ರತಿ ಹಳ್ಳಿ, ಪಟ್ಟಣ ಮತ್ತು ನಗರದಲ್ಲಿ ದೀಪೆÇೀತ್ಸವ ಮಾಡಲು ಪ್ರಚಾರ ಮಾಡುತ್ತಿದೆ. “ಹಣತೆ ವಿತರಣೆ” ಕಾರ್ಯಕ್ರಮ ಯಶಸ್ವಿಯಾಗಿದೆ. ಹಣತೆ ವಿತರಣೆಯ ವ್ಯವಸ್ಥೆಗೆ ಬೂತ್ ಮಟ್ಟದ ಸಮಿತಿಯನ್ನು ರಚಿಸಲಾಗಿತ್ತು ಎಂದು ವಿವರಿಸಿದರು.
ಡಿಸೆಂಬರ್ 14 ರಂದು, ಬಿಜೆಪಿ ಆಡಳಿತ ಇರುವ ಪ್ರಸ್ತುತ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಸಮ್ಮೇಳನವನ್ನು ಸಂಘಟಿಸಲಾಗುವುದು. ಇದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೌರವಾನ್ವಿತ ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್. ಸಂತೋಷ್ ಉಪಸ್ಥಿತರಿರುವರು. ಈ ಕಾರ್ಯಕ್ರಮವು ತರುಣ್ ಚುಗ್ ಮತ್ತು ಸಹ-ಪ್ರಭಾರಿ ಆಶಿಶ್ ಸೂದ್ ಅವರ ಉಸ್ತುವಾರಿತ್ವದಲ್ಲಿ ನಡೆಯಲಿದೆ.
ಮೂರು ದಿನಗಳ ಧಾರ್ಮಿಕ -ಸಾಂಸ್ಕೃತಿಕ ಕಾರ್ಯಕ್ರಮವು ದಿನಾಂಕ 13, 14, 15ರಂದು ನಡೆಯಲಿದೆ. ಡಿಸೆಂಬರ್ 17ರಂದು, ಮೇಯರ್‍ಗಳ ಸಮ್ಮೇಳನ ನಡೆಯಲಿದೆ. ಕೇಂದ್ರ ಸಚಿವಾಲಯದ ವತಿಯಿಂದ ಕಾಶಿ ವಿಶ್ವನಾಥ ಧಾಮದಲ್ಲಿ ನಡೆಯಲಿದೆ. ಕೇಂದ್ರದ ನಗರಾಭಿವೃದ್ಧಿ ಸಚಿವಾಲಯ ಹಾಗೂ ಉತ್ತರ ಪ್ರದೇಶ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯಗಳು ಇದನ್ನು ಆಯೋಜಿಸಲಿವೆ. ಡಿಸೆಂಬರ್ 23ರಂದು ನೈಸರ್ಗಿಕ ಮತ್ತು ಸಾವಯವ ಕೃಷಿಯನ್ನು ಉತ್ತೇಜಿಸಲು ಕಾಶಿಯಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಇದರಲ್ಲಿ ಕೃಷಿ ವಿಜ್ಞಾನಿಗಳು, ಪ್ರಗತಿಪರ ರೈತರು ಮತ್ತು ದೇಶದಾದ್ಯಂತದ ಕೃಷಿ ತಜ್ಞರು ಭಾಗವಹಿಸುತ್ತಾರೆ. ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ಕೃಷಿ ಕ್ಷೇತ್ರ ಮತ್ತು ಅವರ ಹೊಸ ದೃಷ್ಟಿಕೋನವನ್ನು ಹಂಚಿಕೊಳ್ಳುತ್ತಾರೆ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರ ಜನ್ಮದಿನದ ವಾರ್ಷಿಕೋತ್ಸವದ ಅಂಗವಾಗಿ 2022 ರ ಜನವರಿ 12ರಂದು ಕಾಶಿಯಲ್ಲಿ ಯುವ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ದೃಷ್ಟಿಯಿಂದ ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.