ದೇವನಹಳ್ಳಿ: ನಾಲ್ವರು ಯುವಕರ ತಂಡ ಇಂದು ದ್ವಿಚಕ್ರ ವಾಹನದಲ್ಲಿ ನಂದಿಬೆಟ್ಟಕ್ಕೆ ತೆರಳಿದ್ದು, , ಬೆಂಗಳೂರಿಗೆ ಮರಳುವಾಗ ದಾರಿ ಮಧ್ಯೆ ಕೆರೆಯಲ್ಲಿ ಈಜಲು ಮುಂದಾಗಿ ಜಲಸಮಾಧಿಯಾಗಿದ್ದಾರೆ.
ದೇವನಹಳ್ಳಿ ಸಮೀಪದ ರಾಮನಾಥಪುರದ ಕೆರೆಯಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನ ಆರ್.ಟಿ ನಗರದ ಯುವಕರ ತಂಡ ಭಾನುವಾರ ಬೆಳಗ್ಗೆ ನಂದಿಬೆಟ್ಟಕ್ಕೆ ಬೈಕ್ ನಲ್ಲಿ ತೆಳಿದ್ದು, ಮಧ್ಯಾಹ್ನ ನಂದಿಬೆಟ್ಟದಿಂದ ಬೆಂಗಳೂರಿಗೆ ಹೊರಟಿದ್ದರು. ದಾರಿ ಮಧ್ಯೆ ರಾಮನಾಥಪುರ ಕೆರೆಯಲ್ಲಿ ಈಜಲು ಹೋಗಿದ್ದಾರೆ, ಆದರೆ ನೀರಿನಲ್ಲಿ ಮುಳುಗಿದ್ದಾರೆನ್ನಲಾಗಿದೆ.
ಕೆರೆಯ ದಂಡೆಯಲ್ಲಿ ನಿಂತಿದ್ದ ಬೈಕ್‌ಗಳು, ಯುವಕರ ಬಟ್ಟೆ ಮತ್ತು ಶೂಗಳನ್ನ ಗಮನಿಸಿದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ, ಸ್ಥಳಕ್ಕೆ ಧಾವಿಸಿದ ವಿಶ್ವನಾಥಪುರ ಠಾಣೆಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ನೀರಿನಲ್ಲಿ ಮುಳುಗಿರುವ ಶವಗಳ ಪತ್ತೆಗಾಗಿ ಕಾರ್ಯಚಾರಣೆ ನಡೆಸಿದ್ದಾರೆ,
ಸಂಜೆಯ ಹೊತ್ತಿಗೆ ಇಬ್ಬರ ಶವಗಳು ಪತ್ತೆಯಾದವು. ಮತ್ತಿಬ್ಬರಿಗಾಗಿ ರಾತ್ರಿಯವರೆಗೂ ಕಾರ್ಯಚಾರಣೆ ನಡೆದಿದೆ. ಮೃತರ ಸಂಬಂಧಿಗಳು ಸ್ಥಳಕ್ಕೆ ಧಾವಿಸಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿತ್ತು.