ವರದಿ : ಹೆಚ್ ಎಂ ಪಿ ಕುಮಾರ್.
ದಾವಣಗೆರೆ: ಕಲ್ಲುಗಣಿಗಾರಿಕೆಗೆ ಬಳಸುವ ವಿವಿಧ ರೀತಿಯ ಸ್ಫೊಟಕಗಳಿಂದ ಮಾರಣಾಂತಿಕ ಅಪಾಯ ಹಿನ್ನೆಲೆ ರಾಜ್ಯಾದ್ಯಂತ ಸ್ಫೊಟಕ ವಸ್ತುಗಳ ಬಳಕೆ, ಸಾಗಾಣಿಕೆಗೆ ನಿರ್ಬಂಧ ವಿಧಿಸಲಾಗಿದೆ. ಅದರೂ ದಾವಣಗೆರೆಯಲ್ಲಿ ಅಕ್ರಮವಾಗಿ ಸ್ಫಟಕಗಳ ಸಾಗಾಣಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಸ್ಫೋಟಕ ಸಂಗ್ರಹ ಬಗ್ಗೆ ಮಾಹಿತಿ ಕಳೆಹಾಕಿದ ದಾವಣಗೆರೆಯ ಗ್ರಾಮಾಂತರ ಉಪವಿಭಾಗದ ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ ನೇತೃತ್ವದಲ್ಲಿ ಪೊಲೀಸರು ದಾಳಿ 3 ಲಕ್ಷದ 62 ಸಾವಿರಮೌಲ್ಯದ ಸ್ಫಟಕ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ದಲ್ಲಿ ನಡೆದ ಘಟನೆಗಳು ದೇಶಾದ್ಯಂತ ಸಂಚಲನ ಮೂಡಿಸಿದೆ. ಕಲ್ಲು ಕ್ವಾರಿಯಲ್ಲಿ ಕಲ್ಲನ್ನು ಬ್ಲಾಸ್ಟ್ ಮಾಡಲು ಈ ಸ್ಫೊಟಕಗಳನ್ನು ಬಳಸಲಾಗುತ್ತಿದೆ. ಆದ್ರೆ ಇದನ್ನ ಬಳಸಲು ಹಲವು ರೀತಿಯ ಇತಿಮಿತಿಗಳಿವೆ.
ದಾವಣಗೆರೆ ಗ್ರಾಮಾಂತರ ವ್ಯಾಪ್ತಿಯ ಕಾಡಜ್ಜಿ ಗ್ರಾಮದ ಷಣ್ಮುಖಪ್ಪ ಎಂಬವವರಿಗೆ ಸೇರಿದ ದುರ್ಗಾದೇವಿ ಎಕ್ಸ್ ಪ್ಲೋಸಿವ್ ಮ್ಯಾಗಜೀನ್ ಬಳಿ ಇರುವ ಗೋಡಾನ್ ನಲ್ಲಿ ಅಕ್ರಮವಾಗಿ ಸಂಗ್ರಹಣೆ ಮಾಡಿಕೊಂಡಿದ್ದ ಸ್ಫೊಟಕ ವಸ್ತುಗಳು ಹಾಗೂ ಸಾಗಾಣಿಕೆ ಮಾಡಲು ಬಂದಿದ್ದ ಬೋಲೆರೊ ಪಿಕ್ ಅಪ್ ವಾಹನವನ್ನ ಜಪ್ತಿ ಮಾಡಲಾಗಿದೆ.
1.ಹತ್ತು ಸಾವಿರ ಮೌಲ್ಯದ 90 ಜಿಲೆಟಿನ್ ಗಳು.
2. ಎಲೆಕ್ಟ್ರಿಕ್ ಡಿಟೋನೆಟರ್.
3. ಪವರ್ ಕಾರ್ಡ್ ಸೇಫ್ಟಿ ಫ್ಯೂಸ್.
4. ಐವತ್ತು ಕೆಜಿಯ 5 ಚೀಲಗಳಲ್ಲಿದ್ದ ಅಮೋನಿಯಂ ನೈಟ್ರೇಟ್.
ಹೀಗೆ 5 ಲಕ್ಷದ 62 ಸಾವಿರ ಮೌಲ್ಯದ ಸ್ಫೋಟಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದಾವಣಗೆರೆ ಮೂಲದ ವಿಕ್ರಮ್, ನಾಗರಾಜ್, ವಿಜಯ್, ಮಂಜುನಾಥ್ ಎಂಬವವರನ್ನ ಬಂಧಿಸಿದ್ದು, ಷಣ್ಮುಖಪ್ಪ ಹಾಗೂ ಮುಜಿಬ್ ಎಂಬವವರ ಮೇಲೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದಾಳಿಯಲ್ಲಿ ಭಾಗವಹಿಸಿದ್ದ ಡಿವೈಎಸ್‌ಪಿ ನೇತೃತ್ವದ ತಂಡಕ್ಕೆ ದಾವಣಗೆರೆ ಎಸ್.ಪಿ.ಹನುಮಂತರಾಯ ಅವರು ಬಹುಮಾನ ಘೋಷಿಸಿದ್ದಾರೆ.