ಮಂಗಳೂರು: ನವರಾತ್ರಿ ಅಂಗವಾಗಿ ಕರಾವಳಿಯಲ್ಲಿ ವಿವಿಧ ಉತ್ಸವಗಳು ಗಮನಸೆಳೆದವು. ಕುದ್ರೋಳಿ ದಸರಾ ಒಂದೆಡೆಯಾದರೆ ದುರ್ಗಾ ದೇಗುಲಗಳಲ್ಲಿ ವಿಜಯದಶಮಿ ಅಂಗವಾಗಿ ಕೈಂಕರ್ಯಗಳು ನೆರವೇರಿದವು.
ಇದೇ ವೇಳೆ ಬಂಟ್ವಾಳ ತಾಲೂಕಿನ ಕೊಯಿಲ ಬಳಿ ಶಾರದೋತ್ಸವ ಶೋಭಾಯಾತ್ರೆ ಈ ಬಾರಿಯ ನವರಾತ್ರಿ ವೈಭವಕ್ಕೆ ಆಕರ್ಷಣೆ ತುಂಬಿತು. ಭಕ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗಿಯಾದರು.
ಕೊಯಿಲದಲ್ಲಿ ರಾಯಿ-ಕೊಯಿಲ -ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಮತ್ತು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ 19ನೇ ವರ್ಷ ಪೂಜಿಸಲಾದ ಶಾರದಾ ವಿಗ್ರಹ ಶುಕ್ರವಾರ ಸಂಜೆ ಸರಳ ರೀತಿಯಲ್ಲಿ ಕುದ್ಮಾಣಿ ಹೊಳೆಯಲ್ಲಿ ವಿಸರ್ಜನೆಗೊಂಡಿತು. ಅದ್ದೂರಿ ಶೋಭಾಯಾತ್ರೆಗೆ ಬದಲಾಗಿ ಭಜನೆ ಮತ್ತೆ ಚೆಂಡೆ ವಾದ್ಯದೊಂದಿಗೆ ಭಕ್ತಿಪ್ರದಾನ ಮೆರವಣಿಗೆ ನಡೆಯಿತು.
ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಸಹಿತ ಗಣ್ಯರನೇಕರ ಪಾಲ್ಗೊಳ್ಳುವಿಕೆ ಗಮನಸೆಳೆಯಿತು. ವೇದಮೂರ್ತಿ ರಾಜಾರಾಮ ಭಟ್, ಟ್ರಸ್ಟಿನ ಅಧ್ಯಕ್ಷ ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು, ಸಮಿತಿ ಅಧ್ಯಕ್ಷ ರಂಜನ್ ಕುಮಾರ್ ಶೆಟ್ಟಿ ಅರಳ, ಹಿಂದೂ ಸಂಘಟನೆಗಳ ಪ್ರಮುಖರಾದ ವಸಂತ ಕುಮಾರ್ ಅಣ್ಣಳಿಕೆ , ಡೊಂಬಯ ಅರಳ, ಅಜಿತ್ ಕುಮಾರ್, ಉಮೇಶ ಡಿ.ಎಂ., ಮನೋಹರ ಕೊಯಿಲ, ಸದಾನಂದ ಗೌಡ ರಾಯಿ, ರಮಾನಾಥ ರಾಯಿ, ಹರೀಶ ಬಾಡಬೆಟ್ಟು, ಸಂತೋಷ್ ಕುಮಾರ್ ಬೆಟ್ಟು, ಪ್ರಶಾಂತ್ ಶೆಟ್ಟಿ, ಶರತ್ ಕೊಯಿಲ, ವಿಶ್ವನಾಥ ಗೌಡ ಮೊದಲಾದವರು ಈ ಉತ್ಸವದಲ್ಲಿ ಭಾಗಿಯಾಗಿ ಕೈಂಕರ್ಯದ ಯಶಸ್ಸಿಗೆ ಸಾಕ್ಷಿಯಾದರು.