ಬೆಂಗಳೂರು: ಸ್ಮಾರ್ಟ್ ಸಿಟಿ ನಗರಗಳಲ್ಲಿ ಸೈಕಲ್ ಚಾಲನೆಗಾಗಿಯೇ ವಿಶೇಷ ಪಥಗಳನ್ನು ನಿರ್ಮಿಸಿದ್ದು ಈ ಕುರಿತಾದ ರಾಷ್ಟç ಮಟ್ಟದ ಸ್ಪರ್ಧೆಯಲ್ಲಿ ನಮ್ಮ ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯು ಪುರಸ್ಕಾರ ಪಡೆದುಕೊಂಡಿದೆ.
ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವ ಸಲವಾಗಿ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆ ರಾಷ್ಟç ಮಟ್ಟದಲ್ಲಿ ಆಯೋಜಿಸಿದ್ದ ಈ Cycles4change ಸ್ಪರ್ಧೆಯಲ್ಲಿ 107 ಸ್ಮಾರ್ಟ್ ಸಿಟಿ ನಗರಗಳು ಪಾಲ್ಗೊಂಡಿದ್ದು ಸೈಕಲ್ ಸ್ನೇಹಿ ಪಥಗಳ ನಿರ್ಮಾಣದಲ್ಲಿ ಬೆಂಗಳೂರು, ರಾಷ್ಟç ಮಟ್ಟದ ಪುರಸ್ಕಾರಕ್ಕೆ ಭಾಜನವಾಗಿದೆ ಎಂದು ಬೆಂಗಳೂರು ಸ್ಮಾರ್ಟ್ ಸಿಟಿ ಮುಖ್ಯಸ್ಥ ಮತ್ತು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀ ರಾಕೇಶ್ ಸಿಂಗ್ ತಿಳಿಸಿದ್ದಾರೆ.
ಬೆಂಗಳೂರು ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಸೈಕಲ್ ಚಾಲನೆಗಾಗಿಯೇ ಶಾಸ್ವತವಾದ ಪಥಗಳನ್ನು ನಿರ್ಮಿಸಿದ್ದು ಬಿಬಿಎಂಪಿ ವ್ಯಾಪ್ತಿಯಲ್ಲಿ ಸೈಕಲ್ ಚಾಲನೆ ಮತ್ತು ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲು ಇನ್ನೂ ಹಲವು ಕ್ರಮಗಳನ್ನು ಕೈಗೊಂಡು ಬೆಂಗಳೂರು ನಗರವನ್ನು ಮಾದರಿ ನಗರವನ್ನಾಗಿ ರೂಪಿಸಲಾಗುವುದೆಂದು ಶ್ರೀ ರಾಕೇಶ್ ಸಿಂಗ್ ತಿಳಿಸಿದ್ದಾರೆ.
ಸೈಕಲ್ ಬಳಕೆ ಉತ್ತೇಜಿಸುವ ಈ ಸ್ಪರ್ಧೆಯಲ್ಲಿ ಕೇಂದ್ರ ಸರ್ಕಾರದಿಂದ ಒಂದು ಕೋಟಿ ರೂಪಾಯಿಗಳ ಪುರಸ್ಕಾರವನ್ನು ಪಡೆದ ಹೆಮ್ಮೆ ನಮ್ಮ ಬೆಂಗಳೂರು ಸ್ಮಾರ್ಟ್ ಸಿಟಿಯದ್ದು.