ಕಳೆದುಹೋದ ಹಸುವಿನ ಕಿವಿಯೊಲೆಯ ಇನ್ಸೂರೆನ್ಸ್.. ಹಸು ಸಾವನ್ನಪ್ಪಿದ್ದಾಗ ಇನ್ಸೂರೆನ್ಸ್ ಹಣ ನೀಡಲು ಬಮೂಲ್ ನಿರಾಕರಣೆ..
ದೊಡ್ಡಬಳ್ಳಾಪುರ : ಪಶು ಸಂಗೋಪನೆಯಿಂದ ಜೀವನ ನಡೆಸುತ್ತಿರುವ ಬಡ ಕುಟುಂಬಕ್ಜೆ ಬಮೂಲ್ ಶಾಕ್ ನೀಡಿದೆ. ಹಾಲು ಕರೆಯುತ್ತಿದ್ದ ಹಸು ಹಾವು ಕಡಿತದಿಂದ ಇದಕ್ಕಿದಂತೆ ಸಾವನ್ನಪ್ಪಿದೆ. ಹಸುವಿನ ಕಿವಿಯೊಲೆ ಕಳೆದುಹೋಗಿದ್ದರಿಂದ ಇನ್ಸೂರೆನ್ಸ್ ಹಣ ನೀಡಲು ಬಮೂಲ್ ಅಧಿಕಾರಿಗಳು ನಿರಕಾರಿಸಿದ್ದಾರೆ. ಇದರಿಂದ ಬಡ ಕುಟುಂಬ ಸಂಕಷ್ಟಕ್ಕೆ ತುತ್ತಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರದ ಮುನಿಯಮ್ಮ ಕುಟುಂಬಕ್ಕೆ ಹಸು ಸಾಕಣಿಕೆ ಪ್ರಮುಖ ಉದ್ಯೋಗ. ಪಶು ಸಂಗೋಪನೆಯಿಂದ ಜೀವನ ನಡೆಯುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಮುನಿಯಮ್ಮನವರ 5 ಹಸುಗಳು ಇದಕ್ಕಿದಂತೆ ಸಾವನ್ನಪ್ಪಿದವು. ಆದರೆ ಇಲ್ಲಿಯವರೆಗೂ ಇನ್ಸೂರೆನ್ಸ್ ಹಣ ಮಾತ್ರ ಮುನಿಯಮ್ಮರವರ ಕೈಗೆ ಸಿಕ್ಕಿಲ್ಲ. ಲಕ್ಷ ಲಕ್ಷ ಬೆಲೆ ಬಾಳುವ ಹಸುವನ್ನ ಕಳೆದುಕೊಂಡ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
ಎರಡು ವರ್ಷದಲ್ಲಿ ಲಕ್ಷಾಂತರ ಬೆಲೆಯ 5 ಹಸುಗಳನ್ನ ಕಳೆದು ಕೊಂಡಿರುವ ಮುನಿಯಮ್ಮ, ಬರುವ ಇನ್ಸೂರೆನ್ಸ್ ಹಣದಲ್ಲಿ ಮತ್ತೊಂದು ಹಸುವನ್ನ ಖರೀದಿ ಜೀವನ ನಡೆಸುವ ಆಸೆಯಲ್ಲಿದ್ದಾರೆ, ಆದರೆ ಯಾವ ಅಧಿಕಾರಿಯೂ ಆಕೆಯ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿಲ್ಲ.