ಬೆಂಗಳೂರು: ಕರ್ನಾಟಕದ ಕೋವಿಡ್ -19 ಸ್ಥಿತಿಗತಿ ಕುರಿತಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವೀಡಿಯೋ ಸಂವಾದ ನಡೆಸಿ ಮಾಹಿತಿ ಪಡೆದರು.
ಕರ್ನಾಟಕದ ಪರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಅವರು ಭಾಗವಹಿಸಿ ರಾಜ್ಯದ ಸ್ಥಿತಿಗತಿ ಬಗ್ಗೆ ಪ್ರಧಾನಿಯವರ ಗಮನಕ್ಕೆ ತಂದರು. ಈ ವಿಡಿಯೋ ಸಂವಾದ ಸಂದರ್ಭದಲ್ಲಿ ಗಣಿ ಮತ್ತು ಭೂವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಭಾಗವಹಿಸಿದ್ದರು. ಲೋಕಸಭಾ ಸದಸ್ಯರಾದ ಶ್ರೀ ಡಾ.ಉಮೇಶ್ ಜಾಧವ್ ಶಾಸಕರಾದ ಶ್ರೀ ಬಸವರಾಜ್ ಮತ್ತಿಮೊಡ್, ವಿಧಾನಪರಿಷತ್ ಸದಸ್ಯ ಶ್ರೀ ಶಶಿಲ್ ನಮೋಶಿ, ಜಿಲ್ಲಾಧಿಕಾರಿ ಶ್ರೀ ವಿ.ವಿ.ಜೋಶ್ನಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.