ಬೆಂಗಳೂರು: ಕೋವಿಡ್ ಮಾರ್ಗಸೂಚಿ ಹಾಗೂ ರಾಜ್ಯ ಸರ್ಕಾರದ ಆದೇಶಗಳ ಬಗ್ಗೆ ಹೊಟೇಲ್ ಮಾಲೀಕರು ಆಕ್ರೋಶ ಹೊರ ಹಾಕಿದ್ದಾರೆ. ರಾಜ್ಯ ಸರ್ಕಾರವು ‘ಒಂದು ‘ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ’ ನೀಡಿಸಂತಿದೆ ಎಂದು ಬೆಂಗಳೂರು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ, ಪಿ.ಸಿ.ರಾವ್ ಅವರು ಅಸನಾಧಾನ ಹೊರಹಾಕಿದ್ದಾರೆ.
ಡಿಸೆಂಬರ್ 28ರಿಂದ ಶೇ.50ರ ಸೂತ್ರದಂತೆ ಮತ್ತೊಮ್ಮೆ ಹೊಸ ನಿಯಮ ಘೋಷಿಸಿರುವ ರಾಜ್ಯ ಸರ್ಕಾರದ ತೀರ್ಮಾನದ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಸಿನಿಮಾ ಮಂದಿರಗಳಲ್ಲಿ ಶೇಕಡಾ ನೂರರಷ್ಟು ಮಂದಿ ಭಾಗಿಯಾಗಲು ಅವಕಾಶ ಇದೆ, ಶಾಲೆಗಳಲ್ಲೂ ಶೇಕಡಾ ನೂರರಷ್ಟು ಮಕ್ಕಳು ಸೇರಲು ಅವಕಾಶ ಇದೆ. ಆದರೆ ಹೊಟೇಲ್‌ಗಳಲ್ಲಿ ಶೇ.50ರಷ್ಟು ಮಂದಿ ಮಾತ್ರ ಇರಬಹುದೆಂದು ನಿಯಮ ಜಾರಿಗೊಳಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಚಾರದಲ್ಲಿ ತಜ್ಞರ ಮಾಹಿತಿಯಷ್ಟೇ ಆಲ್ಲ, ಹೊಟೇಲ್ ಉದ್ಯಮ ಕ್ಷೇತ್ರದ ಪ್ರಮುಖರ ಅಭಿಪ್ರಾಯಗಳನ್ನೂ ಸರ್ಕಾರ ಕೇಳಲಿ ಎಂದು ಅವರು ಹೇಳಿದ್ದಾರೆ.