ಬೆಂಗಳೂರು: ರಾಜ್ಯದಲ್ಲೂ ಕೋವಿಡ್ ವೈರಾಣು ಹಾವಳಿ ಜನರನ್ನು ಆತಂಕಕ್ಕೀಡುಮಾಡಿದ್ದು ಸೋಂಕು ತಡೆ ಸಂಬಂಧ ಸರ್ಕಾರ ಕಸರತ್ತಿನಲ್ಲಿ ತೊಡಗಿದೆ. ಇದೀಗ 10 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿರುವ ಸರ್ಕಾರ ಮುಂದಿನ ಕಠಿಣ ನಿರ್ಧಾರಕ್ಕೆ ಮುನ್ನ ಸರ್ವಪಕ್ಷ ಸಭೆ ಕರೆದಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಈಗ ಸಮಯ ಮೀರಿ ಹೋದ ಮೇಲೆ ಸಿಎಂ ಸರ್ವಪಕ್ಷ ನಾಯಕರ ಸಭೆ ಕರೆದಿದ್ದಾರೆ ಎಂದು ಟೀಕಿಸಿದ್ದಾರೆ
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಈವರೆಗೆ ಕೋವಿಡ್ ಕುರಿತು ನಮ್ಮ ಯಾವ ಸಲಹೆಗಳನ್ನೂ ಪರಿಗಣಿಸಿಲ್ಲ, ಸರ್ಕಾರ ಇಷ್ಟ ಬಂದಂತೆ ನಡೆದುಕೊಂಡಿದೆ. ಈಗ ಸಮಯ ಪರಿಸ್ಥಿತಿ ಕೈ ಮೀರಿ ಹೋದಾಗ ಸಭೆ ಕರೆದಿದ್ದಾರೆ ಎಂದರು. ಈ ಸಭೆಯಲ್ಲಿ ಭಾಗವಹಿಸುವ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದಾಗಿ ಡಿಕೆಶಿ ಹೇಳಿದರು.