ದೆಹಲಿ: ಆಶಾ ಕಾರ್ಯಕರ್ತೆಯರೂ ಸೇರಿದಂತೆ ಕೊರೋನಾ ವಾರಿಯರ್ಸ್ ವಿಮಾ ವಿಚಾರ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸೂಕ್ತ ಕ್ರಮವಹಿಸಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ಯೋಜನೆ ವಿಸ್ತರಣೆ ಸಂಬಂಧ ಕೇಂದ್ರ ಸಂಪುಟ ಅನುಮೋದನೆ ನೀಡಿರುವ ಕುರಿತಂತೆ ಉದಯ ನ್ಯೂಸ್ ಜೊತೆ ಸಚಿವ ಡಿ.ವಿ. ಸದಾನಂದಗೌಡರು ಮಾಹಿತಿ ಹಂಚಿಕೊಂಡರು. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಸೇರಿದಂತೆ ಕೊರೋನಾ ವಾರಿಯರ್ಸ್ ವಿಮಾ ಸೌಲಭ್ಯ ವಿಸ್ತರಣೆಯಾಗದಿರುವ ವಿವಾದ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಕೊರೋನಾ ವಾರಿಯರ್ಸ್‌ಗಳ ವಿಮಾ ಬೇಡಿಕೆ ಕುರಿತಂತೆ ಹಣಕಾಸು ಇಲಾಖೆ ಪರಿಶೀಲಿಸುತ್ತಿದೆ. ವಿಮಾ ಸಂಸ್ಥೆಗಳ ಜೊತೆ ಒಪ್ಪಂದ ಪ್ರಕ್ರಿಯೆ ನಡೆದಿದ್ದು ವಿಮಾ ಸೌಲಭ್ಯ ಮುಂದಿವರಿಸಲಾಗುತ್ತದೆ ಎಂದರು. ಆರೋಗ್ಯ ಕಾರ್ಯಕರ್ತರ ಹಿತ ಕಾಪಾಡುವ ವಿಚಾರದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ, ಸೂಕ್ತ ನ್ಯಾಯ ಕೊಡಿಸುತ್ತದೆ ಎಂದವರು ಭರವಸೆ ನೀಡಿದರು.
ಏನಿದು ವಿಮೆ?
ಆರೋಗ್ಯ ಕ್ಷೇತ್ರದಲ್ಲಿ ದುಡಿಯುವ ಆಶಾ ಕಾರ್ಯಕರ್ತೆಯರು ಸೇರಿದಂತೆಕೊರೋನಾ ವಾರಿಯರ್ಸ್‌ಗಳಿಗೆ 50 ಲಕ್ಷ ರೂ.ಗಳ ವಿಮಾ ಸೌಲಭ್ಯವನ್ನು ಸರ್ಕಾರ ಕಲ್ಪಿಸಿತ್ತು. ಆ ಸೌಲಭ್ಯ ಕಳೆದ ತಿಂಗಳು ಅವಧಿ ಮುಗಿದಿದ್ದು, ಮಧ್ಯಂತರ ವ್ಯವಸ್ಥೆಯಾಗಿ ಏಪ್ರಿಲ್ 24ರವರೆಗೆ ವಿಸ್ತರಿಸಲಾಗಿತ್ತು. ಈ ವಿಮಾ ರಕ್ಷಣೆಯನ್ನು ಒಂದು ವರ್ಷಕ್ಕೆ ವಿಸ್ತರಿಸಲು ಸರ್ಕಾರ ಯೋಜಿಸಿದೆ ಎನ್ನಲಾಗುತ್ತಿದೆ.
ಆಶಾ ಕಾರ್ಯಕರ್ತೆಯರ ಸಂಘದ ಆಗ್ರಹ:
ಕೆಲ ದಿನಗಳ ಹಿಂದಷ್ಟೇ ಈ ವಿಮಾ ಸೌಲಭ್ಯ ನವೀಕರಿಸುವಂತೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಅಧ್ಯಕ್ಷರಾದ ಕೆ.ಸೋಮಶೇಖರ್ ಹಾಗೂ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಅವರು ಸರ್ಕಾರವನ್ನು ಒತ್ತಾಯಿಸಿದ್ದರು. ಸಾರ್ವಜನಿಕ ಸೇವೆಯಲ್ಲಿರುವ ಆಶಾ ಕಾರ್ಯಕರ್ತೆಯರು ಹಾಗೂ ಕೊರೋನಾ ವಾರಿಯರ್ಸ್‌ಗಳ ಸಮಸ್ಯೆಯತ್ತ ಬೆಳಕು ಚೆಲ್ಲಿದ್ದರು. ಇದೀಗ ಈ ಪ್ರಮುಖರ ಮನವಿಗೆ ಕೇಂದ್ರ ಸರ್ಕಾರ ಸ್ಪಂಧಿಸಿದ್ದು ರಾಜ್ಯ ಸರ್ಕಾರವೂ ಸಹಮತ ವ್ಯಕ್ತಪಡಿಸುವ ಆಶಾವಾದ ಇದೆ.