ದೆಹಲಿ: ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಾಣು ಹಾವಳಿ ಭಾರತದಲ್ಲೂ ತಲ್ಲಣ ಸೃಷ್ಟಿಸುತ್ತಿದೆ. ನಿತ್ಯವೂ ಸಾವಿರಾರು ಪಾಸಿಟಿವ್ ಕೇಸುಗಳು ದಾಖಲಾಗುತ್ತಿತ್ತು. ಆದರೆ ಭಾನುವಾರ ದಾಖಲಾಗಿರುವ ಅಂಕಿ ಅಂಶಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತಿದೆ.
ಇಂದು ಬೆಳಿಗ್ಗೆ ವರದಿಯಾಗಿರುವಂತೆ 24 ತಾಸುಗಳಲ್ಲಿ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಒಟ್ಟು ಪಾಸಿಟಿವ್ ಕೇಸುಗಳು 1 ಲಕ್ಷದ 03 ಸಾವಿರದ 558. ಭಾರತದಲ್ಲಿ ಕೊರೋನಾ 2ನೇ ಅಲೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ ಎಂಬುದನ್ನು ಈ ಅಂಕಿ ಅಂಶ ಅನಾವರಣ ಮಾಡಿದೆ.
ಇದೇ ವೇಳೆ, ದೇಶದಲ್ಲಿ ಒಂದೇ ದಿನ 478 ಮಂದಿ ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಈ ಮೂಲಕ ಇದುವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 1 ಲಕ್ಷದ 65 ಸಾವಿರದ 101ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
India’s daily new cases continue to rise. Over 1 Lakh (1,03,558) new cases registered in the last 24 hours. pic.twitter.com/K2E27gFurz
— Ministry of Health (@MoHFW_INDIA) April 5, 2021