ದೆಹಲಿ: ಚೀನಾದಲ್ಲಿ ಹುಟ್ಟಿ ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾದ ರೂಪಾಂತರಿ ಇದೀಗ ಹಲವು ಭೀತಿಯ ಅಲೆಯನ್ನೇ ಸೃಷ್ಟಿಸಿದೆ. ಇದರ ಜೊತೆಯಲ್ಲೇ ಉದಯ ರವಿ ನಾಡು ಜಪಾನಿನನಲ್ಲಿ ಮತ್ತೊಂದು ಹೊಸ ಪ್ರಬೇಧದ ವೈರಾಣು ಸೋಂಕು ಪತ್ತೆಯಾಗಿದೆ.
ಬ್ರಿಟನ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ ರೂಪಾಂತರಿ ಕೊರೋನಾ ವೈರಸ್ ನ ಮತ್ತೊಂದು ರೂಪ ಇದಾಗಿದೆ ಎನ್ನಲಾಗುತ್ತಿದೆ. ಬ್ರೆಜಿಲ್ ನಿಂದ ಜಪಾನ್ ಗೆ ತೆರಳಿದ್ದ ಹಲವರಲ್ಲಿ ಈ ಪರಿವರ್ತಿತ ಹೊಸ ಮಾದರಿಯ ವೈರಸ್ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಟೋಕಿಯೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ರೆಜಿಲ್ ನಿಂದ ಬಂದಿದ್ದ 40 ವರ್ಷದ ವ್ಯಕ್ತಿಯಲ್ಲಿ ರೂಪಾಂತರಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಇದು ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ರೂಪಾಂತರಿ ವೈರಸ್ ಗಿಂತಲೂ ಭಿನ್ನವಾಗಿದೆ ಎಂದು ಜಪಾನ್ ಸರ್ಕಾರ ಹೇಳಿದೆ.