ಮಡಿಕೇರಿ: ಹಲವು ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದಿಡುವ ಮೂಲಕ ಕೊಡಗಿನ ವೀರರು ಮಹತ್ವದ ನಿರ್ಣಯಗಳನ್ನು ಅಂಗೀಕರಿಸಿ ನಾಡಿನ ಗಮನಸೆಳೆದಿದ್ದಾರೆ.
ಮೂರ್ನಾಡು ಸಮೀಪದ ‘ಕಾಫಿ ಕ್ಯಾಸಲ್ ಕೂರ್ಗ್’ನಲ್ಲಿ ‘ಕೊಡವರ ಹಕ್ಕೊತ್ತಾಯಗಳ’ ಕುರಿತು ವಿಚಾರ ಸಂಕಿರಣ ನಡೆಯಿತು. ಕೊಡವರ 5 ಪ್ರಧಾನ ಹಕ್ಕೋತ್ತಾಯಗಳು ಮತ್ತು ಗೌರವಾನ್ವಿತ ಗುರಿಯನ್ನು ಸಾಧಿಸಲು ಸಿಎನ್‌ಸಿ ಆಶ್ರಯದಲ್ಲಿ ದೀರ್ಘಕಾಲದ ರಾಜಕೀಯ, ಕಾನೂನಾತ್ಮಕ ಮತ್ತು ಸಂವಿಧಾನಾತ್ಮಕ ಆಂದೋಲನಕ್ಕೆ ಸಂಕಲ್ಪಿಸಿ ನಿರ್ಣಯ ಅಂಗೀಕರಿಸಲಾಯಿತು.
ಖ್ಯಾತ ಕಾನೂನು ಪರಿಣಿತರು ಮತ್ತು ಸಂವಿಧಾನ ತಜ್ಞರು, ಹೆಸರಾಂತ ನ್ಯಾಯಾವಾದಿಗೆ ‘ಕೊಡವ ರತ್ನ’ ಬಿರುದು ನೀಡಿ ಸನ್ಮಾನಿಸಲಾಯಿತು. ಹಾಗೂ ಶ್ರೇಷ್ಠ ಸಂಸದಿಯ ಪಟುವಿಗೆ ‘ಕೊಡವ ರತ್ನ’ ಬಿರುದು ನೀಡಿ ಗೌರವಾರ್ಪಣೆ ಸಲ್ಲಿಸಲಾಯಿತು.
‘ಕೊಡವ ರತ್ನ’ ಸನ್ಮಾನಿತರು :ಮಾಜಿ ಅಡ್ವೋಕೇಟ್ ಜನರಲ್ ಎ.ಎಸ್ ಪೊನ್ನಣ್ಣ, ಇವರು ಕೊಡವರ ಎಸ್. ಟಿ. ಟ್ಯಾಗ್ ಮತ್ತು ಬಂದೂಕು ವಿನಾಯತಿ ಹಕ್ಕಿನ ಕುರಿತು ಸಿ ಎನ್ ಸಿ ಪರವಾಗಿ ಪರಿಣಾಮಕಾರಿಯಾಗಿ ಹೈಕೋರ್ಟ್‌ನಲ್ಲಿ ವಾದ ಮಂಡಿಸುತ್ತಿದ್ದಾರೆ. ಅವರ ಸೇವೆಯನ್ನು ಶ್ಲಾಘಿಸಿ ‘ಕೊಡವ ರತ್ನ’ ಬಿರುದು ನೀಡಿ ಸನ್ಮಾನಿಸಲಾಯಿತು.
‘ಕೊಡವ ರತ್ನ’ ಗೌರವಾರ್ಪಣೆಗೆ ಭಾಜನರಾದವರು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್. ಇವರು 2016 ರ ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆ ಮೂಲಕ ಕೊಡವ ತಕ್ಕನ್ನು 8 ನೇ ಶೆಡ್ಯೂಲ್‍ಗೆ ಸೇರಿಸುವ ಸಫಲ ಪ್ರಯತ್ನ ನಡೆಸಿದ್ದಾರೆ. 2019 ರಲ್ಲಿ ಎಸ್ ಟಿ ಕಾನ್ಸ್ಟಿಟ್ಯೂಷನ್ ಎಮೆಂಡ್‍ಮೆಂಟ್ ಚರ್ಚೆಯ ಸಂಧರ್ಭ ಕೊಡವರನ್ನು ಎಸ್ ಟಿ. ಪಟ್ಟಿಗೆ ಸೇರಿಸಬೇಕೆಂಬ ವಿಚಾರವನ್ನು ಪಾರ್ಲಿಮೆಂಟ್‍ನಲ್ಲಿ ದಾಖಲಿಸಿದ್ದಾರೆ. ಕೊಡವರ ಬಂದೂಕು ಹಕ್ಕು ವಿನಾಯತಿಯು ಕೇವಲ 10 ವರ್ಷಕ್ಕೆ ಸೀಮಿತಗೊಳ್ಳದೆ ಮುಂದುವರಿಯಬೇಕೆಂದು ‘ಆಮ್ರ್ಸ್ ಎಮೆಂಡ್‍ಮೆಂಟ್’ ಕಾಯ್ದೆ ಚರ್ಚೆ ಸಂಬಂಧ 2019 ರಲ್ಲಿ ಪಾರ್ಲಿಮೆಂಟಿನಲ್ಲಿ ಪ್ರತಿಪಾದಿಸಿದ್ದಾರೆ ಮತ್ತು 2020 ರಲ್ಲಿ ಪ್ರತ್ಯೆಕ ಕೊಡವ ಅಭಿವೃದ್ಧಿ ಪರಿಷತ್ತು ಸ್ಥಾಪಿಸಬೇಕೆಂದು ಕರ್ನಾಟಕ ವಿಧಾನಪರಿಷತ್‍ನಲ್ಲಿ ಪ್ರಸ್ಥಾಪಿಸಿದ್ದಾರೆ. ಅವರ ಅಪರಿಮಿತ ಪ್ರೀತಿ ಕಾಳಜಿಯನ್ನು ಪರಿಗಣಿಸಿ ಶ್ರೀಯುತರಿಗೆ ‘ಕೊಡವ ರತ್ನ’ ಬಿರುದು ನೀಡಿ ಗೌರವಿಸಲಾಗಿದೆ.
ವಕೀಲ ಲಕ್ಕವಳ್ಳಿ ಮಂಜುನಾಥ್, ಡಾ|| ಪರದಂಡ ಸಹಿತ ಹಲವು ಗಣ್ಯರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ಈ ವಿಚಾರಗೋಷ್ಠಿಯಲ್ಲಿ ಪ್ರಮುಖ ಹಕ್ಕೊತ್ತಾಯಗಳ ಸಾಧನೆಗಾಗಿ ಸಿಎನ್‍ಸಿ ಆಶ್ರಯದಲ್ಲಿ ನಡೆಯುತ್ತಿರುವ ದೀರ್ಘಕಾಲದ ರಾಜಕೀಯ ಕಾನೂನಾತ್ಮಕ ಮತ್ತು ಸಂವಿಧಾನಾತ್ಮಕ ಹೋರಾಟ ಮತ್ತು ಅದರ ಯಶಸ್ವಿಗಾಗಿ ಕೈಜೋಡಿಸುವ ದೃಢ ಸಂಕಲ್ಪದ ಭಾಗವಾಗಿ ಮಹತ್ವದ