ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಸಾಧ್ಯತೆಗಳ ಬಗೆಗಿನ ವರದಿಗಳು ಸಂಚಲನಕ್ಕೆ ಕಾರಣವಾಗಿದೆ. ಆದರೆ ಬಿಎಸ್‌ವೈ ನಿಷ್ಠರು ನಾಯಕತ್ವ ಬದಲಾವಣೆ ಇಲ್ಲವೇ ಇಲ್ಲ ಎನ್ನುತ್ತಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರವಾಗಿ ನಡೆಯುತ್ತಿರುವ ಚರ್ಚೆ ಕುರಿತಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ, ನಾಯಕತ್ವ ಬದಲಾವಣೆ ವಿಚಾರ ಸತ್ಯಕ್ಜೆ ದೂರವಾದುದು ಎಂದಿದ್ದಾರೆ. ಬಿಎಸ್ ವೈ ಇಳಿ ವಯಸ್ಸಿನಲ್ಲಿಯೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು..
ಇಳಿ ವಯಸ್ಸಿನಲ್ಲಿ ಇಷ್ಟು ಕೆಲಸ ಮಾಡುತ್ತಿದ್ದಾರೆ. ಅವರ ಅನುಭವವನ್ನು ರಾಜ್ಯಕ್ಕೆ ಧಾರೆ ಎರೆದಿದ್ದಾರೆ. ಮುಂದಿನ ಎರಡು ವರ್ಷದವರೆಗೆ ಅವರೇ ಮುಂದುವರೆಯಬೇಕು ಎಂದು ಸಚಿವ ನಿರಾಣಿ ಅಭಿಪ್ರಾಯಪಟ್ಟರು.ಬಿಎಸ್‌ವೈ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದರು.
ಇದನ್ನೂ ಓದಿ.. ಬಿಎಸ್‌ವೈ ನಾಯಕತ್ವಕ್ಕೆ ಜಿಂದಾಲ್ ವಿವಾದದ ತೂಗುಗತ್ತಿಯ ಆತಂಕ
ಸಿಎಂ ಸೀಟು ಖಾಲಿ ಇಲ್ಲ. ಇದ್ದಿದ್ದರೆ ಮಾತನಾಡಬಹುದಿತ್ತು. ಆದರೆ ಬಿಎಸ್ ವೈ ಇದ್ದಾರೆ ಆ ಸ್ಥಾನದಲ್ಲಿ ಇದ್ದಾರೆ ಎನ್ನುವ ಮೂಲಕ ನಾಯಕತ್ವ ಬದಲಾವಣೆಯನ್ನು ತಳ್ಳಿಹಾಕಿದರು. ನಾನು ಕೊರೊನಾ ಸಂಬಂಧ ನಮ್ಮ ಇಲಾಖೆ ಬಗ್ಗೆ ತಲೆಕೆಸಿಕೊಳ್ಳುತ್ತೇವೆ. ಹೈ ಕಮಾಂಡ್ ಯಾವ ನಿರ್ಧಾರ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧ ಎಂದು ಗೊಂದಲಗಳಿಗೆ ತೆರೆಎಳೆದರು.
ಮುಂದಿನ ಚುನಾವಣೆಯಲ್ಲಿ ಎಮ್.ಎಲ್.ಎ ಸೀಟ್ ಕೊಡದೇ ಇಲ್ಲ ಎಂದು ಪಕ್ಷ ತೀಮಾ೯ನ ಮಾಡಿದರೂ ನಾವು ಅದಕ್ಕೂ ಬದ್ಧ. ನಮ್ಮ ಪಕ್ಷ ಏನೇ ಹೇಳಿದರೂ ಕೇಳುತ್ತೇವೆ ಎಂದು ಸ್ಪಷ್ಟಪಡಿಸಿದರು.