ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಲಾಕ್‌ಡೌನ್ ವಿಸ್ತರಿಸಲು ಒತ್ತಡ ಹೆಚ್ಚಾಗಿದೆ. ಇಂದು ಪ್ರಧಾನಿ ಜೊತೆಗಿನ ಸಂವಾದದ ಸಂದರ್ಭದಲ್ಲೂ ಸಾಕಷ್ಟು ಸಲಹೆ ವ್ಯಕ್ತವಾಗಿದ್ದು, ಎಲ್ಲಾ ವಿಚಾರಗಳನ್ನು ಪರಿಶೀಲಿಸಿ ಸಿಎಂ ಯಡಿಯೂರಪ್ಪ ಅವರು ಬುಧವಾರ ಬೆಳಿಗ್ಗೆ ಮಹತ್ವದ ನಿರ್ಧಾರವನ್ನು ಪ್ರಕಟಿಸುವ ನಿರೀಕ್ಷೆ ಇದೆ.
ಬುಧವಾರ ಅವರು ಸುದ್ದಿಗೋಷ್ಠಿ ಕರೆದಿದ್ದು ವಿದ್ಯಮಾನಗಳು ತೀವ್ರ ಕುತೂಹಲ ಕೆರಳಿಸಿವೆ.
ಪ್ರಸ್ತುತ ಜಾರಿಯಲ್ಲಿರುವ ಲಾಕ್‌ಡೌನ್ ಮಾದರಿಯ ಕಠಿಣ ನಿಯಮಗಳನ್ನು ಮತ್ತಷ್ಟು ದಿನಗಳಿಗೆ ವಿಸ್ತರಿಸುವ ಅನಿವಾರ್ಯತೆ ಇದೆ ಎಂದು ಅಧಿಕಾರಿಗಳು ಹಾಗೂ ಸಚಿವರು ಸರ್ಕಾರಕ್ಕೆ ಮನವರಿಕೆ ಮಾಡಿದ್ದಾರೆ. ಅದರ ಜೊತೆಯಲ್ಲೇ ಶ್ರಮಿಕ ವರ್ಗಕ್ಕೆ ಪರಿಹಾರ ಘೋಷಿಸಬೇಕೆಂದು ಪ್ರತಿಪಕ್ಷಗಳೂ ಒತ್ತಾಯಿಸಿವೆ. ಹಾಗಾಗಿ ಪರಿಹಾರ ಘೋಷಣೆಯ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಯಾರಿಗೆಲ್ಲಾ ಸಿಗಲಿದೆ ವಿಶೇಷ ಪ್ಯಾಕೇಜ್ ನೆರವು?
- ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರನ್ಬು ಸರ್ಕಾರ ಮರೆತಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಸ್ತುತ ಸಙದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಮಹತ್ವದ್ದಾಗಿದ್ದು, ಅವರಿಗಾಗಿ ವಿಶೇಷ ಧನಸಹಾಯ ಪ್ರಕಟಿಸುವ ನಿರೋಕ್ಷೆ ಇದೆ.
- ಹೂ, ತರಕಾರಿ ಬೆಳೆಗಾರರು ಕೂಡ ಪ್ರಸ್ತುತ ಪರಿಸ್ಥಿತಿಯಿಂದಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಅವರಿಗಾಗಿ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಹಣದ ನೆರವು ಘೋಷಿಸುವ ಸಾಧ್ಯತೆಗಳಿವೆ.
- ಮಡಿವಾಳ, ಸವಿತಾ ಸಮುದಾಯಕ್ಕೆ ಕಳೆದ ವರ್ಷದಂತೆ ಈಬಾರಿಯೂ ಆರ್ಥಿಕ ನೆರವು ಪ್ರಕಟಿಸುವ ಚಿಂತನೆ ನಡೆದಿದೆ.
- ಕಟ್ಟಡ ಕಾರ್ಮಿಕರಿಗೆ, ಹೋಟೆಲ್ ಕಾರ್ಮಿಕರಿಗೆ , ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಆರ್ಥಿಕ ನೆರವು ಸಿಗುವ ನಿರೀಕ್ಷೆ ಇದೆ.
- ವಿದ್ಯುತ್ ಬಿಲ್, ನೀರಿನ ಬಿಲ್,
ಮನೆ ತೆರಿಗೆ ಪಾವತಿಗೆ ಸಮಯಾವಕಾಶ ಪ್ರಕಟಿಸುವ ಚಿಂತನೆಯೂ ಸರ್ಕಾರದ್ದಾಗಿದೆ. - ಇಂದಿರಾ ಕ್ಯಾಂಟೀನ್‍ನಲ್ಲಿ ಈಗಾಗಲೇ ಉಚಿತ ಊಟದ ವ್ಯವಸ್ಥೆ ಮುಂದುವರಿಸುವ ಜೊತೆಗೆ, ಬಡವರ್ಗದವರಿಗೆ ರೇಷನ್ ಕಿಟ್ ಕೊಡುವ ಯೋಚನೆಯೂ ಇದೆ ಎನ್ನಲಾಗುತ್ತಿದೆ.