ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಮಾವಿನ ಹಣ್ಣಿನ ಕಾಲದಲ್ಲಿ ಊಟ ಸಂಪೂರ್ಣವಾಗ ಬೇಕೆಂದರೆ ಒಂದು ಐಟಮ್ ಮಾವಿನ ಹಣ್ಣಿನದ್ದು ಇರಲೇ ಬೇಕು. ಹುಳಿಯಿದ್ದರೂ ಹುಳಿಯೆನಿಸದೇ ಇರುವುದು ಕಾಡು ಮಾವಿನ ಹಣ್ಣಿನ ವಿಶೇಷತೆ. ಹೆಸರು ಕೇಳುವಾಗಲೇ ಬಾಯಿಯಲ್ಲಿ ಜೊಲ್ಲು ಸುರಿಯದಿರದು!!? ಬಾಯಿ ರುಚಿ ಹೆಚ್ಚಿಸುವ ಚಂಡ್ರುಪುಳಿ ಅಥವಾ ಮಾವಿನ ಹಣ್ಣಿನ ಗೊಜ್ಜು ಮಾಡುವ ವಿಧಾನ ನೋಡೋಣ.
ಕಾಟು ಮಾವಿನ ಹಣ್ಣುಗಳು ೧೦, ಜೀರಿಗೆ ಮೆಣಸು ೧೦, ಶುಂಠಿ ೧ ಇಂಚು, ಉಪ್ಪು, ಬೆಲ್ಲ ರುಚಿಗೆ, ಒಗ್ಗರಣೆಗೆ ಒಣಮೆಣಸು ೧, ಸಾಸಿವೆ ೧ಚಮಚ, ತುಪ್ಪ ಅಥವಾ ಎಣ್ಣೆ ೧ ಚಮಷ, ಬೇವಿನ ಸೊಪ್ಪು.
ಮಾಡುವ ವಿಧಾನ
- ಕಾಡು ಮಾವಿನ ಹಣ್ಣಿನ ಸಿಪ್ಪೆ ತೆಗೆಯ ಬೇಕು.
ಸ್ವಲ್ಪ ನೀರಿಗೆ ಜೀರಿಗೆ ಮೆಣಸು, ಬೆಲ್ಲ, ಉಪ್ಪು ಹಾಕಿ ಕುದಿಯಲು ಇಡ ಬೇಕು. - ಕುದಿಯುತ್ತರುವ ನೀರಿಗೆ ಮಾವಿನ ಹಣ್ಣನ್ನು ಹಾಕಿ ಬೇಯಿಸ ಬೇಕು.
- ಬೇವಿನ ಸೊಪ್ಪನ್ನು ಬಳಸಿ ತುಪ್ಪ ಒಗ್ಗರಣೆ ಹಾಕಿದರೆ ಕಾಡು ಮಾವಿನ ಹಣ್ಣಿನ ಗೊಜ್ಜು ಅಥವಾ ಚಂಡ್ರುಪುಳಿ ತಯಾರು.