ಬೆಂಗಳೂರು: ಕೊರೋನಾ ತಲ್ಲಣದ ಪರಿಸ್ಥಿತಿ ನಡುವೆ ತಣ್ಣಗಿದ್ದ ಸಿಡಿ ವಿವಾದ ರಾಜ್ಯ ರಾಜಕಾರಣದಲ್ಲಿ ಮತ್ತೆ ಪ್ರತಿಧ್ವನಿಸತೊಡಗಿದೆ. ವಿವಾದಿತ ಸಿಡಿಯಲ್ಲಿ ಇರುವುದು ತಾನೇ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒಪ್ಪಿಕೊಂಡಿದ್ದೇ ತಡ, ಆರೋಪಿಯನ್ನು ಬಂಧಿಸಲು ಕಾಂಗ್ರೆಸ್ ಒತ್ತಾಯಿಸಲು ಆರಂಭಿಸಿದೆ.
ಇದೀಗ ರಾಜ್ಯ ಸರ್ಕಾರದ ವಿರುದ್ದ ಮತ್ತೆ ಸಿಡಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿರುವ ಪ್ರತಿಪಕ್ಷ ಈ ಪ್ರಕರಣ ಕುರಿತ ತನಿಖೆ ಬಗ್ಗೆ ತನ್ನದೇ ಶೈಲಿಯಲ್ಲಿ ವಿಶ್ಲೇಷಣೆ ಮಾಡಿದೆ. ‘ನಾನವನಲ್ಲ’ ಎಂದವರು ಈಗ ‘ನಾನೇ ಅವನು’ ಎನ್ನುತ್ತಿದ್ದಾರೆ!
ಸಿಡಿ ಅಸಲಿ, ಅದು ತಾವೇ ಎಂದಮೇಲೆ ಮೊದಲು ನಿರಾಕರಿಸಿದ್ದೇಕೆ ಎಂದು ಕಾಂಗ್ರಸ್ ಪಕ್ಷ ಟ್ವೀಟ್ ಮಾಡಿ ರಮೇಶ್ ಜಾರಕಿಹೊಳಿ ಅವರನ್ನು ಪ್ರಶ್ನಿಸಿದೆ. SIT ರಚನೆ ಮಾಡಿಸಿದ್ದೇಕೆ? ಜನರ ಹಣ ಪೋಲು ಮಾಡಿಸಿದ್ದೇಕೆ? ಸರ್ಕಾರವನ್ನೂ ಪ್ರಶ್ನಿಸಿರುವ ಕಾಂಗ್ರೆಸ್, ಆರೋಪಿ ಒಪ್ಪಿಕೊಂಡಿದ್ದಾಯ್ತು, ಇನ್ನಾದರೂ ಸಂತ್ರಸ್ತೆಯ ದೂರಿನ ಮೆರೆಗೆ ಬಂಧಿಸಿ ಕಾನೂನು ಪಾಲಿಸುವಿರಾ? ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನೂ ಪ್ರಶ್ನಿಸಿದೆ.
'ನಾನವನಲ್ಲ' ಎಂದವರು ಈಗ 'ನಾನೇ ಅವನು' ಎನ್ನುತ್ತಿದ್ದಾರೆ!@RameshJarkiholi ಅವರೇ ಸಿಡಿ ಅಸಲಿ, ಅದು ತಾವೇ ಎಂದಮೇಲೆ ಮೊದಲು ನಿರಾಕರಿಸಿದ್ದೇಕೆ ❓ SIT ರಚನೆ ಮಾಡಿಸಿದ್ದೇಕೆ❓ ಜನರ ಹಣ ಪೋಲು ಮಾಡಿಸಿದ್ದೇಕೆ❓@BSBommai ಅವರೇ, ಆರೋಪಿ ಒಪ್ಪಿಕೊಂಡಿದ್ದಾಯ್ತು, ಇನ್ನಾದರೂ ಸಂತ್ರಸ್ತೆಯ ದೂರಿನ ಮೆರೆಗೆ ಬಂಧಿಸಿ ಕಾನೂನು ಪಾಲಿಸುವಿರಾ? pic.twitter.com/Y2WkYLesiF
— Karnataka Congress (@INCKarnataka) May 25, 2021