ಬೆಂಗಳೂರು: ರಮೇಶ್ ಜಾರಕಿಹೊಳಿ ತಲೆದಂಡಕ್ಕೆ ಕಾರಣವಾದ ಸಿಡಿ ವಿವಾದ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಜಟಾಪಟಿ ಮುಂದುವರಿದಿದೆ. ಎಸ್‌ಐಟಿ ಬಗ್ಗೆ ಕಾಂಗ್ರೆಸ್ ನಾಯಕರು ಅನುಮಾನ ವ್ಯಕ್ತಪಡಿಸಿದರೆ, ಇದೀಗ ಸಂತ್ರಸ್ತೆಯನ್ನು ಕೆಪಿಸಿಸಿ ಕಚೇರಿಯಿಂದಲೇ ನಿಯಂತ್ರಿಸಲಾಗಿತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಪ್ರಕರಣವು ಕೆಪಿಸಿಸಿ ಕಚೇರಿಯಿಂದಲೇ ನಿರ್ವಹಣೆಯಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಬಿಜೆಪಿ, ಸಂತ್ರಸ್ಥೆಗೆ ನಲಪಾಡ್ ಸ್ನೇಹಿತರು ಕಾರಿನ ವ್ಯವಸ್ಥೆ ಮಾಡುತ್ತಾರೆ. ಸಂತ್ರಸ್ಥೆಯ ಕಾರನ್ನು ನಲಪಾಡ್ ಸ್ನೇಹಿತರು ಹಿಂಬಾಲಿಸುತ್ತಾರೆ. ಕೆಪಿಸಿಸಿ ಕಚೇರಿಯಿಂದಲೇ ಈ ಪ್ರಕರಣ ನಿರ್ವಹಣೆಯಾಗುತ್ತಿದೆ ಎಂಬುದು ದಿನದಿಂದ ದಿನಕ್ಕೆ ನಿಜವಾಗುತ್ತಿದೆ ಎಂದಿದೆ.
https://mobile.twitter.com/BJP4Karnataka/status/1377143105774788609
ಏನಾಗುತ್ತಿದೆ ಇಲ್ಲಿ ಎಂದು ಟ್ವೀಟ್ ಮೂಲಕ ಪ್ರಶ್ನಿಸಿರುವ ಬಿಜೆಪಿ, ಪ್ರಕರಣದ ಸಂತ್ರಸ್ಥೆ ಫೋನ್ ಸಂಭಾಷಣೆಯಲ್ಲಿ ಮಹಾನಾಯಕ ನೆರವು ನೀಡುತ್ತಿದ್ದಾರೆ ಎಂದು ಹೇಳುತ್ತಾರೆ. ನ್ಯಾಯಾಧೀಶರ ಮುಂದೆ ಹಾಜರಾಗುವಾಗ ಕೆಪಿಸಿಸಿ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಮುಕುಂದ್ ರಾಜ್ ಹಾಜರಿರುತ್ತಾರೆ ಎಂದು ಬೊಟ್ಟುಮಾಡಿ ಕಾಂಗ್ರೆಸ್ ನಡೆ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.
https://mobile.twitter.com/BJP4Karnataka/status/1377142921200209924