ಉಡುಪಿ: ಕರಾವಳಿಯಲ್ಲಿ ಮುಂಗಾರು ವರ್ಷಧಾರೆ ಅವಾಂತರವನ್ನೇ ಸೃಷ್ಟಿಸಿದೆ. ಒಂದಿಲ್ಲೊಂದು ಘಟನೆಗಳು ಮರುಕಳಿಸುತ್ತಲಿದ್ದು ಇದೀಗ ಬೈಂದೂರು ಬಳಿಬಯುವಕ ನೀರು ಪಾಲಾದ ಘಟನೆಯಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ಹೊಳೆಯ ದಾರಿಯಾಗಿ ನೆಡೆದುಕೊಂಡು ಹೋದ ಯುವಕ ಹೊಳೆಯಲ್ಲಿ ನಾಪತ್ತೆಯಾಗಿದ್ದಾನೆ. ಉಡುಪಿ ಜಿಲ್ಲೆ ಬೈಂದೂರು ಸಮೀಪ ಸುಮನಾವತಿ ನದಿಯಲ್ಲಿ ಈ ಘಟನೆ ನಡೆದಿದೆ.
ಹೊಳೆಯಲ್ಲಿ ನಾಪತ್ತೆಯಾದ ವ್ಯಕ್ತಿಯನ್ನು ಚಂದ್ರ ನಾಯ್ಕ್ ( 35 ) ಎಂದು ಗುರುತಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದಿ, ಯುವಕನಿಗಾಗಿ ಶೋಧ ಕೈಗೊಂಡರು.
ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರೂ ಪರಿಶೀಲನೆ ನಡೆಸಿದರು.