ಬಿಎಸ್‌ಎಫ್ ಮಹಿಳಾ ಸಾಧಕರ ದಿನಾಚರಣೆ.. ಕುತೂಹಲದ ಕೇಂದ್ರಬಿಂದುವಾದ ಅರ್ಜುನ ಪ್ರಶಸ್ತಿ ವಿಜೇತ ಅಂಜುಬಾಬಿ ಜಾರ್ಜ್…
ದೇವನಹಳ್ಳಿ: ಯಲಹಂಕ ಬಳಿಯ ಬಿಎಸ್‌ಎಫ್ ತರಬೇತಿ ಕೇಂದ್ರದ ಆವರಣದಲ್ಲಿಂದು ಮಹಿಳಾ ಸಾಧಕರ ದಿನಾಚರಣೆಯನ್ನ ಆಚರಿಸಲಾಯ್ತು. ಸ್ತ್ರೀಯತ್ವ ಶರ್ಶಿಕೆಯಡೆ ಆಯೋಜನೆ ಮಾಡಿದ್ದ ಮಹಿಳಾ ಸಾಧಕ ದಿನಾಚರಣೆಯನ್ನ ಪದ್ಮಶ್ರೀ, ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿ ವಿಜೇತ ಅಥ್ಲೆಟಿಕ್ ಅಂಜುಬಾಬಿ ಜಾರ್ಜ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಬಿಎಸ್‌ಎಫ್ ತರಬೇತಿ ಕೇಂದ್ರದ ಐಜಿಪಿ ಸಾಬು ಎ ಜೋಸೇಪ್ ಸೇರಿ ಹಿರಿಯ ಅಧಿಕಾರಿಗಳು ಹಾಗೂ ಬಿಎಸ್ಎಪ್ ಯೋಧರು ಭಾಗವಹಿಸಿದ್ದರು. ಜತೆಗೆ ವಿಶೇಷವಾಗಿ ಬಿಎಸ್ಎಪ್ನ ಮಹಿಳಾಮಣಿಗಳು ಮಹಿಳಾ ಸಾಧಕರ ದಿನದ ಆಚರಣೆಯ ನಿಮಿತ್ತ ವಿವಿಧ ಸಾಂಸ್ಕೃತೀಕ ಕಾರ್ಯಕ್ರಮಗಳನ್ನ ನಡೆಸಿಕೊಟ್ಟರು. ಇನ್ನೂ ಮಹಿಳೆಯರು ನಡೆಸಿಕೊಟ್ಟ ನೃತ್ಯಗಳು ನೆರೆದಿದ್ದ ಎಲ್ಲರ ಗಮನ ಸೆಳೆಯಿತು.
ಮಹಿಳೆಯರ ಕ್ರೀಡಾ ಕ್ಷೇತ್ರದ ಸಾಧನೆ ಹಾಘೂ ಪ್ರೇಎಣಾ ಸಾಧಕರಿಗೆ ಗೌರವ ಸೂಚಿಸಲು ಈ ಕಾರ್ಯಕ್ರಮ ಆಯೋಜಿಸಿದ್ದಾಗಿ ಬಿಎಸ್‌ಎಫ್‌ನ ಐಜಿಪಿ ಸಾಬು ಎ ಜೋಸೇಪ್ ತಿಳಿಸಿದರು.