ದೆಹಲಿ: ಯವಕರ ಪಾಲಿಗೆ ಹೀರೋ ಎಂದೇ ಗುರುತಾಗುತ್ತಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಉತ್ತರ ಪ್ರದೇಶದಲ್ಲಿ ಮೇನಿಯಾ ಸೃಷ್ಟಿಸಿದ್ದಾರೆ. ಕೆಲ ಸಮಯದ ಹಿಂದೆ ಕೈ ನಾಯಕಿ ಪ್ರಿಯಾಂಕ ಭೇಟಿಯಾದ ಸಂದರ್ಭದಲ್ಲಿ ಜನಜಾತ್ರೆಗೆ ಸಾಕ್ಷಿಯಾಗಿದ್ದ ಯುಪಿಯಲ್ಲಿ ಈ ಬಾರಿ ಕನ್ನಡಿಗ ಸಿ.ಟಿ.ರವಿ ಅವರು ಮೇನಿಯಾ ಸೃಷ್ಟಿಸಿದ್ದು ವಿಶೇಷ.
ಉತ್ತರ ಪ್ರದೇಶಕ್ಕೆ ಸಂಘಟನಾತ್ಮಕ ಪ್ರವಾಸ ಕೈಗೊಂಡ ಸಿ.ಟಿ.ರವಿ ಬಿಜೆಪಿ ಪಾಳಯದಲ್ಲಿ ಕುತೂಹಲದ ಕೇಂದ್ರಬಿಂದುವಾದರು. ಸಾವಿರಾರು ಕಮಲ ಕಾರ್ಯಕರ್ತರು ಜಮಾಯಿಸಿದ್ದ ಕಾರ್ಯಕ್ರಮ ಸ್ಥಳದಲ್ಲಿ ಸಿ.ಟಿ.ರವಿ ಅವರನ್ನು ಹಿರಿಯ ನಾಯಕರು ಸ್ವಗತಿಸಬೇಕಿದ್ದ ಸನ್ನಿವೇಶದ ಬದಲು ಯುವಜನ ಸಮೂಹ ರವಿ ಜೊತೆ ಸೆಲ್ಫೀಗಾಗಿ ಮಿಗಿಬಿದ್ದರು. ಕಾರ್ಯಕರ್ತರ ಉತ್ಸಾಹ ಪಕ್ಷದ ಮುಖಂಡರ ಪಾಲಿಗೆ ಅಚ್ಚರಿಯ ಕ್ಷಣವೆನಿಸಿತು.
ಎಸ್.ಸಿ.ಮೋರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿ.ಟಿ.ರವಿ ಅವರು ಯೋಗಿಯ ನಾಡಿಗೆ ತೆರಳಿದ್ದರು. ಮೋದಿ ಪ್ರತಿನಿಧಿಸುತ್ತಿರುವ ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಮುಖಂಡರು ರವಿಯನ್ನು ಸ್ವಾಗತಿಸಿದರು. ನಿಲ್ದಾಣದಿಂದ ಅವರು ಹೊರ ಬರುತ್ತಿದ್ದಂತೆಯೇ ಅಲ್ಲಿ ಜಮಾಯಿಸಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರು ಸಿ.ಟಿ.ರವಿಗೆ ಜೈಕಾರ ಹಾಕಿದ ಸನ್ನಿವೇಶ ಕುತೂಹಲಕಾರಿ ಪ್ರಸಂಗಕ್ಕೆ ಸಾಕ್ಷಿಯಾಯಿತು. ರವಿ ಜೊತೆ ಸೆಲ್ಫೀ ತೆಗೆಯಲು ಕಾರ್ಯಕರ್ತರು ಮುಗಿಬಿದ್ದರು.
ಮೋದಿ ಪ್ರತಿನಿಧಿಸುತ್ತಿರುವ ಈ ಕ್ಷೇತ್ರದಲ್ಲಿ ಪ್ರಧಾನಿ ಭೇಟಿ ಸಂದರ್ಭದಲ್ಲಿ ಇಂತಹ ಸನ್ನಿವೇಶ ಕಂಡುಬರುತ್ತಿತ್ತು. ಅದೇ ರೀತಿಯ ದೃಶ್ಯವು ಸಿ.ಟಿ.ರವಿ ಭೇಟಿಯ ಸಂದರ್ಭದಲ್ಲೂ ಕಂಡುಬಂದದ್ದು ಬಿಜೆಪಿ ನಾಯಕರ ಪಾಲಿಗೂ ಅಚ್ಚರಿ ಎನಿಸಿತು. ಅನಂತರ ಕಾನ್ಪುರ ಸಹಿತ ವಿವಿಧೆಡೆ ಭೇಟಿ ನೀಡಿದಾಗಲೂ ಇದೇ ರೀತಿಯ ಸನ್ನಿವೇಶ ಕಂಡುಬಂತು.
ಈ ನಡುವೆ ಮೋದಿ ಜನ್ಮ ದಿನದ ಅಂಗವಾಗಿ ಭಾರತ್ ಮಾತಾ ಮಂದಿರದಲ್ಲಿ ಆಯೋಜಿತವಾದ ಕಾರ್ಯಕ್ರಮವೂ ಗಮನಸೆಳೆಯಿತು. ಕಾರ್ಯಕರ್ತರ ಜೊತೆ ಸೇರಿ ಬರೋಬ್ಬರಿ 71 ಸಾವಿರ ದೀಪಗಳನ್ನು ಬೆಳಗಿಸಿದರು. ಅಲ್ಲೂ ಸಿ.ಟಿ. ರವಿ ಆಕರ್ಷಣೆಯ ಕೇಂದ್ರಬಿಂದುವಾದರು.
ಈ ನಡುವೆ, ಬಿಜೆಪಿ ಎಸ್ಸಿ ಮೋರ್ಚಾದ ಕಾರ್ಯಕಾರಿಣಿ ಸಭೆಯಲ್ಲಿ ಮಾರ್ಗದರ್ಶನ ಭಾಷಣ ಮಾಡಿದ ಸಿ.ಟಿ.ರವಿ, ದೇಶ ಪರಿವರ್ತನೆಯಾದ ವೈಖರಿ ಬಗ್ಗೆ ಗಮನಸೆಳೆದರು. ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿಯ ಪರಿಕಲ್ಪನೆಯೇ ದೇಶ ಸಮೃಧ್ದಿಯ ಯಶೋಗಾಥೆಗೆ ಕಾರಣವಾಗಿದೆ ಎಂದರು.
ಮೋದಿ ಸರ್ಕಾರದ ಸಂಪುಟದಲ್ಲಿ ದಲಿತ ನಾಯಕರಿಗೆ ಪ್ರಾಧಾನ್ಯತೆ ನೀಡಲಾಗಿದೆ, ಹಲವರು ಎಸ್ಸಿ ನಾಯಕರನ್ನು ರಾಜ್ಯಪಾಲರನ್ನಗಿ ಮಾಡಲಾಗಿದೆ. ವಿವಿಧ ಪ್ರಾಧಿಕಾರ, ಮಂಡಳಿಗಳಲ್ಲೂ ಎಸ್ಸಿ-ಎಸ್ಟಿ ಪ್ರಮುಖರನ್ನೇ ನೇಮಕ ಮಾಡಲಾಗಿದೆ ಎಂದರು.
ಬೇರೆ ಪಕ್ಷಗಳು ದಲಿತರನ್ನು ಓಟ್ ಬ್ಯಾಂಕ್ ಆಗಿ ಪರಿಗಣಿಸಿದ್ದರೆ, ಮೋದಿ ಸರ್ಕಾರ ದಲಿತ ಸಮುದಾಯಕ್ಕೇ ಶಕ್ತಿ ತುಂಬಿದೆ ಎಂದು ಸಿ.ಟಿ.ರವಿ ಹೇಳಿದರು. ಹಿಂದುಳಿದ ವರ್ಗ, ದಲಿತ ಸಮೂಹದ ಅಭ್ಯುದಯದತ್ತ ಕೇಂದ್ರ ಸರ್ಕಾರ ಸಮರ್ಥ ಹೆಜ್ಜೆ ಇಟ್ಟಿದೆ ಎಂದ ಅವರು, ಈ ಅಭಿವೃದ್ಧಿ ಕೆಲಸಗಳು ಹಿಂದುಳಿದ ವರ್ಗದವರಿಗೆ ಆಶಾಕಿರಣವಾದರೆ, ಎದುರಾಳಿ ಪಕ್ಷಗಳ ನಾಯಕರ ಮತ್ಸರವನ್ನು ಹೆಚ್ಚಿಸಿದೆ ಎಂದು ಟೀಕಿಸಿದರು.
ಎಸ್.ಸಿ.ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ ಸಹಿತ ಅನೇಕ ನಾಯಕರು ಸಮಾವೇಶದಲ್ಲಿ ಭಾಗಿಯಾಗಿದ್ದರು.