ನವದೆಹಲಿ: ಆಡಳಿತಾರೂಢ ಬಿಜೆಪಿ ಪಾಳಯದಲ್ಲಿ ಭರ್ಜರಿ ಬೆಳವಣಿಗೆಗಳು ನಡೆದಿದ್ದು, ಶೀಘ್ರವೇ ನೂತನ ಅಧ್ಯಕ್ಷರ ನೇಮಕಕ್ಕೆ ತಯಾರಿ ನಡೆದಿದೆ. ಮುಂದಿನ ವರ್ಷ ಫೆಬ್ರವರಿ ಅಂತ್ಯದ ವೇಳೆಗೆ ಬಿಜೆಪಿಗೆ ಹೊಸ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಪ್ರಸಕ್ತ ಜೆ.ಪಿ,ನಡ್ಡಾ ಅವರು ಅಧ್ಯಕ್ಷರಾಗಿದ್ದು ಅವರು ಸಚುವ ಸ್ಥಾನವನ್ನೂ ನಿಭಾಯಿಸುತ್ತಿದ್ದಾರೆ. ಅವರ ಅಧ್ಯಕ್ಷ ಸ್ಥಾನದ ಅವಧಿಯು ಈಗಾಗಲೇ ಮುಗಿದಿದ್ದರೂ ಪಕ್ಷದ ಸಾರಥಿಯನ್ನಾಗಿ ಮುಂದುವರಿಸಲಾಗಿದೆ. ಬದಲಿ ಅಧ್ಯಕ್ಷರ ಹುಡುಕಾಟ ನಡೆದಿದ್ದು, ಪಕ್ಷದ ಸಾಂಸ್ಥಿಕ ಚುನಾವಣೆಯು ಜನವರಿ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಬಳಿಕ ಪಕ್ಷದ ಹೊಸ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದೆ. ಮಾರ್ಚ್ ಅಂತ್ಯದಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭಾ ಬೈಠಕ್’ನಲ್ಲಿ ಬಿಜೆಪಿಯ ನೂತನ ಅಧ್ಯಕ್ಷರೇ ಪಕ್ಷದ ವರದಿಯನ್ನು ನೀಡಲಿದ್ದಾರೆ ಎಂದು ನಾಯಕರು ತಿಳಿಸಿದ್ದಾರೆ.























































