ಚಿಕ್ಕಮಗಳೂರು: ಕಾಲೇಜ್ ಶೌಚಾಲಯದಲ್ಲಿ ಚಿತ್ರೀಕರಣ ಪ್ರಕರಣದಲ್ಲಿ ಪೊಲೀಸ್ ಇಲಾಖೆ ನಡೆದುಕೊಂಡಿರುವ ವೈಖರಿಗೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಉಡುಪಿ ಪ್ರಕರಣದಲ್ಲಿ ಪೊಲೀಸರು ತಡವಾಗಿ FIR ದಾಖಲಿಸಿದ್ದಾರೆ. ಇದು ಸರಿಯಾದ ನಡೆ ಅಲ್ಲ ಎಂದಿದ್ದಾರೆ.
ದೂರು ನೀಡಿದ ತಕ್ಷಣವೇ FIR ದಾಖಲಿಸಬೇಕಾಗಿತ್ತು. ಪ್ರಕರಣ ನಡೆದ ಕೂಡಲೇ ದೂರು ದಾಖಲು ಮಾಡಿಕೊಳ್ಳದೆ, ವಿಳಂಬ ನೀತಿ ಸರಿಯಲ್ಲ ಎಂದವರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಉಡುಪಿ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆದಾಗ ಮಾತ್ರ ಸತ್ಯಾಂಶ ಹೊರಬರಲಿದೆ ಎಂದ ಸಿ.ಟಿ.ರವಿ, ಈ ಬಗ್ಗೆ ಟ್ವಿಟ್ ಮಾಡಿದವರನ್ನು ವಿಚಾರಣೆಗೆ ಒಳಪಡಿಸಿರುವುದು ಸರಿಯಲ್ಲ. ಈ ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ವಿಶ್ಲೇಷಿಸಿದ್ದಾರೆ.