ವಾಷಿಂಗ್ಟನ್: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ನಡುವಿನ ದಾಂಪತ್ಯ ಮುರಿದುಬಿದ್ದಿದೆ. 27 ವರ್ಷಗಳ ಸಂಸಾರ ವಿಚ್ಛೇದನ ಪಡೆಯುವುದರೊಂದಿಗೆ ಅಂತ್ಯಗೊಂಡಿದೆ.
ವಿಚ್ಛೇದನ ಕುರಿತು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಬಿಲ್ ಗೇಟ್ಸ್, 27 ವರ್ಷಗಳ ದಾಂಪತ್ಯದ ನಂತರ ನಾವು ವಿಚ್ಛೇದನ ಘೋಷಿಸಿದ್ದೇವೆ ಎಂದಿದ್ದಾರೆ.
— Bill Gates (@BillGates) May 3, 2021
ಸುಮಾರು 13 ಸಾವಿರ ಕೋಟಿ ಡಾಲರ್ ಸಂಪತ್ತಿನ ಸಿರಿವಂತಿಕೆ ಹೊಂದಿದ್ದ ಬಿಲ್ ಗೇಟ್ಸ್ ಅವರ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ದಂಪತಿ, ಈ ವರೆಗೂ ತಮ್ನದೇ ಆದ ಫೌಂಡೇಷನ್ ಮೂಲಕ ಹಲವು ಸಮಾಜಮುಖಿ ಕೆಲಸ ಮಾಡಿ ಜಾಗತಿಕ ಗಮನಸೆಳೆದಿದ್ದರು.
ಇದೀಗ ವಿಚ್ಚೇದನ ಪಡೆದಿದ್ದರೂ, ಆರೋಗ್ಯ, ಲಿಂಗ ಸಮಾನತೆ, ಶಿಕ್ಷಣ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನಲ್ಲಿ ಒಟ್ಟಾಗಿ ಮುಂದುವರಿಸಲು ಈ ಜೋಡಿ ತೀರ್ಮಾನಿಸಿದೆಯಂತೆ.