ಬೆಂಗಳೂರು: ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ಅಚ್ಚರಿಯ ತಿರುವು ಕಂಡಿದೆ. ಶೋ ಆರಂಭವಾದ ಮೊದಲ ದಿನವೇ ಉಡುಪಿಯ ರಕ್ಷಿತಾ ಶೆಟ್ಟಿ ಅವರನ್ನು ಮನೆಯಿಂದ ಹೊರಗೆ ಕಳಿಸಲಾಗಿತ್ತು. ಕನ್ನಡ ಬಿಗ್ಬಾಸ್ ಇತಿಹಾಸದಲ್ಲಿಯೇ ಇಷ್ಟು ಬೇಗ ಎಲಿಮಿನೇಟ್ ಆದ ಸ್ಪರ್ಧಿ ಅವರು. ಆದರೆ ಈಗ, ಪ್ರೇಕ್ಷಕರ ಬೇಡಿಕೆ ಮತ್ತು ಸಾಮಾಜಿಕ ಮಾಧ್ಯಮದ ಚರ್ಚೆಗಳ ಮಧ್ಯೆ, ರಕ್ಷಿತಾ ಶೆಟ್ಟಿ ಮತ್ತೆ ಬಿಗ್ಬಾಸ್ ಮನೆಯಲ್ಲಿ ಎಂಟ್ರಿ ಕೊಟ್ಟಿದ್ದಾರೆ.
ಬಿಗ್ ಬಾಸ್ ಮನೆಗೆ ಮರಳಿಬಂದಳು ರಕ್ಷಿತಾ
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/X6cFlWGWA2
— Colors Kannada (@ColorsKannada) October 4, 2025
ಕಳೆದ ಭಾನುವಾರ ಶೋ ಪ್ರಾರಂಭವಾದಾಗ 19 ಮಂದಿ ಸ್ಪರ್ಧಿಗಳು ಮನೆ ಸೇರಿದ್ದರು. ಆದರೆ ಕೇವಲ 24 ಗಂಟೆಗಳಲ್ಲೇ ರಕ್ಷಿತಾರ ಹೊರಹಾಕುವ ನಿರ್ಧಾರ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಯಿತು. ಅವರ ಆಟವನ್ನೇ ನೋಡದೆ ತೆಗೆದುಕೊಳ್ಳಲಾದ ಈ ಕ್ರಮದ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಇತ್ತೀಚಿನ ಎಪಿಸೋಡಿನಲ್ಲಿ ರಕ್ಷಿತಾ ಶೆಟ್ಟಿ ಮರುಪ್ರವೇಶ ಮಾಡಿದ್ದು, ಅಭಿಮಾನಿಗಳಲ್ಲಿ ಸಂತೋಷದ ಅಲೆ ಹರಡಿದೆ. ಈಗ ಅವರು ಮನೆಗೆ ಮರಳಿರುವುದರಿಂದ, ಆಟದಲ್ಲಿ ಹೊಸ ತಿರುವುಗಳು ನಿರೀಕ್ಷೆಯಾಗಿವೆ.