ಬೆಂಗಳೂರು: ಕನ್ನಡ ಚಿತ್ರನಟಿ ಜಯಶ್ರೀ ರಾಮಯ್ಯ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾರೆಂಬ ಸುದ್ದಿ ಸ್ಯಾಂಡಲ್‌ವುಡ್ ಲೋಕದಲ್ಲಿ ದುಃಖ ಆವರಿಸುವಂತೆ ಮಾಡಿದೆ.
ಕನ್ನಡ ಕಿರುತೆರೆ ಲೋಕದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 3’ರಲ್ಲಿ ಭಾಗವಹಿಸಿದ್ದ ನಟಿ ಜಯಶ್ರೀ ರಾಮಯ್ಯ ಅವರು ಕಳೆದ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಹೊರವಲಯದ ಮಾಗಡಿ ರಸ್ತೆ ಸಮೀಪ ಜನಪ್ರಿಯ ಲೇಔಟ್ ಬಳಿ ಮನೆಯಲ್ಲಿ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಕೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೊಲ್ಲರಹಟ್ಟಿಯಲ್ಲಿರುವ ಪ್ರಗತಿ ಬಡಾವಣೆಯಲ್ಲಿರುವ ವೃದ್ಧಾಶ್ರಮದಲ್ಲಿ ಈ ಘಟನೆ ನಡೆದಿದೆ. ಸುದ್ದಿ ತಿಳಿದು ಪೊಲೀಸರು ಸ್ಥಳಕ್ಜೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಜಯಶ್ರೀ ರಾಮಯ್ಯ ಅವರು ‘ಕನ್ನಡ ಗೊತ್ತಿಲ್ಲ’, ‘ಉಪ್ಪು ಹುಳಿ ಖಾರ’ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು.