ತುಳುನಾಡಿನಲ್ಲಿ ಭರ್ಜರಿ ಪ್ರದರ್ಶನ ಕಂಡು 50ನೇ ದಿನದತ್ತ ಮುನ್ನುಗ್ಗುತ್ತಿರುವ ‘ಬೋಜರಾಜ್ MBBS’ ತುಳು ಚಿತ್ರ ಏಪ್ರಿಲ್ 8 ರಂದು ಬೆಂಗಳೂರಿನಲ್ಲಿ ಕಮಾಲ್ ಪ್ರದರ್ಶಿಸಲಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಮುಖ ಮಾಲ್ಗಳಲ್ಲಿರುವ ಮಲ್ಟಿಫ್ಲೆಕ್ಸ್ ಥಿಯೇಟರ್ಗಳಲ್ಲಿ ಈ ಸಿನಿಮಾ ಅಬ್ಬರಿಸಲಿದೆ.
ಕೋಸ್ಟಲ್ವುಡ್ನಲ್ಲಿ ಹೊಸ ರೀತಿಯ ತರಂಗ ಎಬ್ಬಿಸಿರುವ ‘ಬೋಜರಾಜ್ MBBS’ ಚಿತ್ರ ಕರಾವಳಿಯ ಸಿನಿಮಾ ಮಂದಿರಗಳಲ್ಲಿ ಯಶೋಗಾಥೆ ಬರೆದಿದೆ. ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ಸಂಚಲನ ಇದೇ ಮೊದಲು ಎಂಬುದಕ್ಕೆ ಸಾಕ್ಷಿಯಾಗಿರುವ ‘ಬೋಜರಾಜ್ MBBS’ ಬಗ್ಗೆ ತುಳುವರ ಸಂಖ್ಯೆ ಹೆಚ್ಚಿರುವ ಮುಂಬೈ ಬೆಂಗಳೂರು ಹಾಗೂ ಸಾಗರೋತ್ತರ ದೇಶಗಳಲ್ಲೂ ಜನ ಸಾಕಷ್ಟು ಕಾತುರದಿಂದ ಇದ್ದಾರೆ. ತುಳುನಾಡಿನ ಯಶಶಸ್ಸಿನ ನಂತರ ಬೆಂಗಳೂರಿನಲ್ಲಿ ಅಬ್ಬರಿಸಲು ಈ ಸಿನಿಮಾ ಸಜ್ಜಾಗಿದೆ. ತುಳು ಭಾಷಿಗರ ಆಗ್ರಹದ ಹಿನ್ನೆಲೆಯಲ್ಲಿ ಏಪ್ರಿಲ್ 8ರಿಂದ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ‘ಬೋಜರಾಜ್ MBBS’ ತುಳು ಸಿನಿಮಾ ಪ್ರದರ್ಶನವಾಗಲಿದೆ ಎಂದು ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ತಿಳಿಸಿದ್ದಾರೆ.
ಏನಿದು ಕುತೂಹಲ.?
ಬೋಜರಾಜ್ ವಾಮಂಜೂರು, ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್, ವಿಜಯಕುಮಾರ್ ಕೊಡಿಯಾಲ್ ಬೈಲ್, ಸಾಯಿಕೃಷ್ಣ ಕುಡ್ಲ, ಉಮೇಶ್ ಮಿಜಾರ್, ಶೀತಲ್ ನಾಯಕ್, ನವ್ಯಪೂಜಾರಿ ನಟಿಸಿರುವ ಈ ಚಿತ್ರ 100% ಕಾಮಿಡಿ ಕಥೆಯನ್ನೊಳಗೊಂಡಿದೆ. ದರ್ಬಾರ್ ಸಿನೆಮಾಸ್ ಬ್ಯಾನರ್ನಲ್ಲಿ ರಫೀಕ್ ದರ್ಬಾರ್ ನಿರ್ಮಿಸಿರುವ ಈ ಚಿತ್ರಕ್ಕೆ ಇಸ್ಮಾಯಿಲ್ ಮೂಡುಶೆಡ್ಡೆ ಆಕ್ಷನ್ ಕಟ್ ಹೇಳಿದ್ದಾರೆ, ಪರ್ವೇಜ್ ಬೆಳ್ಳಾರೆ, ಶರಣ್ ರಾಜ್ ಸಹ ನಿರ್ಮಾಣದ ಈ ಚಿತ್ರಕ್ಕೆ ಸುಜಿತ್ ನಾಯಕ್ ಸಂಕಲನ, ರಾಜೇಶ್ ಭಟ್, ರಾಕಿಸೋನು ಮತ್ತು ಗುರು ಬಾಯಾರು ಸಂಗೀತದ ಸಾಥ್ ನೀಡಿದ್ದಾರೆ. ಷಾಹಜಾನ್ ಹಾಗೂ ಉದಯ ಬಲ್ಲಾಳ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಸಮಾಜಕ್ಕೆ ಉತ್ತಮ ಸಂದೇಶ ಇರುವ ಈ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳೂ ಇವೆ. ಅದರಲ್ಲೂ ದಶಕಗಳ ಹಿಂದಿನ ‘ದಾನೆ ಪೊಣ್ಣೆ’ ಎಂಬ ಹಿಟ್ ಹಾಡು ಈ ಸಿನಿಮಾದಲ್ಲಿ ಹೊಸ ರೂಪದಲ್ಲಿದ್ದು ಎಲ್ಲರ ಗಮನಕೇಂದ್ರೀಕರಿಸಿದೆ.