ಬೆಂಗಳೂರು: ಶಿವರಾಜಕುಮಾರ್ ಅಭಿನಯದ ‘ಭಜರಂಗಿ’ ನಂತರ ಇದೀಗ ಎರಡನೇ ಆವೃತ್ತಿ ತೆರೆಗೆ ಬರಲು ಸಜ್ಜಾಗಿದೆ. ‘ಭಜರಂಗಿ 2′ ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.
ಈ ಬಹುನಿರೀಕ್ಷಿತ ‘ಭಜರಂಗಿ-2’ ಚಿತ್ರ ಮೇ 14ರಂದು ಬಿಡುಗಡೆಯಾಗಲಿದೆ. ಅದಕ್ಕೆ ಪೂರ್ವಭಾವಿಯಾಗಿ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಮಾರ್ಚ್ 15ರಂದು ಸಂಜೆ ಬಿಡುಗಡೆಯಾಗಲಿದೆ. ‘ಭಜರೇ ಭಜರೇ ಭಜರಂಗಿ..’ ಎಂಬ ಹಾಡನ್ನು ಬಿಡುಗಡೆ ಮಾಡಲು ಚಿತ್ರ ತಂಡ ಸಿದ್ದತೆ ನಡೆಸುತ್ತಿದೆ.