ಬೆಂಗಳೂರು: ರೈತರ ಸಾಲ ಮನ್ನಾ ಮಾಡಲು ಒಂದು ತಿಂಗಳ ಗಡುವು ನೀಡಿರುವ ಸಂಯುಕ್ತ ಕಿಸಾನ್ ಮೋರ್ಚ ರಣಕಹಳೆ ಮೊಳಗಿಸಿದ್ದು, ಕ್ರಮ ಕೈಗೊಳ್ಳದಿದ್ದರೆ ದೆಹಲಿ ಚಲೋ ಹಮ್ಮಿಕೊಳ್ಳಲಾಗುವುದು ಎಂಬ ಸಂದೇಶವನ್ನು ಸರ್ಜಾರಗಳಿಗೆ ರವಾನಿಸಿದೆ.
ಬೆಂಗಳೂರಿನಲ್ಲಿ ಆಯೋಜಿತವಾದ ರಾಷ್ಟ್ರೀಯ ರೈತರ ಮಹಾ ಅಧಿವೇಶನ ಗಮನಸೆಳೆಯಿತು. ನಗಾರಿ ಬಾರಿಸುವ ಮೂಲಕ ಮಹಾಧಿವೇಶನ ಉದ್ಘಾಟನೆ ನಡೆಸಿದ ಪಂಜಾಬಿನ ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ಮಾತನಾಡಿ ಪ್ರಜಾಸತ್ತಾತ್ಮಕವಾಗಿರುವ ಸಂಸತ್ತಿನಲ್ಲಿ ನಡೆಯುವ ಕುತಂತ್ರಗಳ ವಿರುದ್ಧ ನಾವು ಜಾಗೃತರಾಗಬೇಕಾಗಿದೆ ಎಂದರು. ರೈತ ಸಂಕುಲ ಉಳಿಸಲು ನಮ್ಮ ಹೋರಾಟ ಅನಿವಾರ್ಯವಾಗಿದೆ ಪಂಜಾಬಿನಿಂದ ಬಾಂಬೆತನಕ 500 ಜನ ರೈತರ ಜೊತೆಗೂಡಿ ಹೋರಾಟ ನಡೆಸಿ ಮುಂಬೈನಲ್ಲಿ ಯಶಸ್ವಿಯಾಗಿದ್ದೇವೆ, ಫೆಬ್ರವರಿ 26ರಂದು ದೆಹಲಿಯಲ್ಲಿ ರೈತರ ಕಹಳೆ ಮೊಳಗಿಸೋಣ ಎಂದರು.ಕರ್ನಾಟಕ ರೈತ ಹೋರಾಟಕ್ಕೆ ದೇಶಕ್ಕೆ ಮಾದರಿಯಾಗಿದೆ ಸಾವಿರಾರು ಸಂಖ್ಯೆಯಲ್ಲಿ ದೆಹಲಿಗೆ ಬನ್ನಿ ಎಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಯುಕ್ತ ಕಿಸಾನ್ ಮೂರ್ಛೆ ದಕ್ಷಿಣ ಭಾರತ ಸಂಚಾಲಕ ಕುರುಬೂರ್ ಶಾಂತಕುಮಾರ್ ಮಾತನಾಡಿ ರೈತರು ದೇಶದ ಜನರ ಅನ್ನಕ್ಕಾಗಿ ಸಾಲ ಮಾಡಿದ್ದಾರೆ ಹಣವನ್ನು ಭೂಮಿಗೆ ಹಾಕಿದ್ದಾರೆ ಪ್ರಕೃತಿಯ ತೊಂದರೆಯಿಂದ ಸಾಲದ ಹಣ ವಾಪಸ್ ಬಂದಿಲ್ಲ ಅದಕ್ಕೆ ರೈತರು ಹೊಣೆಯಲ್ಲ ಆದ್ದರಿಂದ ರೈತರ ಸಾಲ ಮನ್ನ ಮಾಡಿ ಎಂದು ಒತ್ತಾಯಿಸುತ್ತಿದ್ದೇವೆ. ಒಂದು ತಿಂಗಳ ಗಡುವ ನೀಡುತ್ತೇವೆ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯದ ರೈತರು ದೆಹಲಿ ಚಲೋ ನಡೆಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬರಗಾಲದ ಭಿಕ್ಷೆ ನೀಡಲು ಹೊರಟಿದೆ ಸರ್ಕಾರ ರೈತರು ಸ್ವಾಭಿಮಾನಿಗಳು ಹಗುರವಾಗಿ ನಡೆದುಕೊಂಡರೆ ನಾವು ಸುಮ್ಮನೆ ಇರಲು ಸಾಧ್ಯವಿಲ್ಲ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡಲು ಪ್ರಧಾನಿಗಳಿಗೆ ಭರವಸೆ ನೀಡಿ ಒಂದು ವರ್ಷವಾದರೂ ಸಾಧ್ಯವಾಗಿಲ್ಲ ರೈತರು ಹೆಸರಿನಲ್ಲಿ ರಾಜಕಾರಣ ಮಾಡುವುದು ದೇಶದ್ರೋಹದ ಕೆಲಸ ಎಂದು ಆಡಳಿತಗಾರರು ತಿಳಿದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಆಹಾರಕ್ಕಾಗಿ ಬಿಕ್ಷೆ ಬೇಡುತ್ತಿದ್ದ ಭಾರತ ದೇಶ ಇಂದು ಸ್ವಾವಲಂಬಿಯಾಗಿ ಹೊರದೇಶಕ್ಕೆ ಆಹಾರ ದಾನ ಮಾಡುತ್ತಿದ್ದೇವೆ ಇದು ರೈತರ ಶ್ರಮದಿಂದ ಸಾಧ್ಯವಾಗಿದೆ ಎಂಬುದನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ದುರ್ದೈವದ ಸಂಗತಿಯಾಗಿದೆ ಎಂದರು , ವಿಶ್ವ ರೈತ ದಿನದ ಅಂಗವಾಗಿ ರಾಜ್ಯದ ವಿವಿಧ ಭಾಗದ 5 ರೈತರನ್ನು ಗುರುತಿಸಿ ಐಎಎಸ್ ಪದವಿ ಪುರಸ್ಕಾರ ನೀಡಲಾಯಿತು, ಆರಂಭದಲ್ಲಿ ದೆಹಲಿಯಲ್ಲಿ ಹೋರಾಟ ಮಾಡಿದ 750 ಜನ ಪ್ರಾಣ ಕಳೆದುಕೊಂಡವರಿಗಾಗಿ ನಮನ ಶ್ರದ್ಧಾಂಜಲಿ ಸಲ್ಲಿಸಲಾಯಿತು,
ಕರ್ನಾಟಕ ಜಲ ಸಂರಕ್ಷಣ ಸಮಿತಿ ಸಂಚಾಲಕ ಮುಖ್ಯಮಂತ್ರಿ ಚಂದ್ರು ಮಾತನಾಡಿ ಸ್ವಾತಂತ್ರ ಬಂದು 76 ವರ್ಷಗಳಾದರೂ ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ, ದೇಶದ ಜನರಿಗಾಗಿ ಆಹಾರ ಬೆಳೆಯುವ ರೈತನಿಗೆ 60 ವರ್ಷ ತುಂಬಿದರು ಜೀವನ ಭದ್ರತೆ ಇಲ್ಲ ಪ್ರತಿ ತಿಂಗಳು 5000 ಪಿಂಚಣಿ ಯಾಕೆ ಕೊಡಬಾರದು ಎಂದು ಬೇಸರ ವ್ಯಕ್ತಪಡಿಸಿದರು,
ಕೇರಳ ರಾಜ್ಯದ ಕೆ ವಿ ಬಿಜು, ಹರಿಯಾಣದ ಅಭಿಮನ್ ಕೋಹರ, ಒಡಿಶಾದ ಸಚಿನ್ ಮಹಾಪಾತ್ರ, ಮಹಾರಾಷ್ಟ್ರದ ಶಂಕರ್ ದರಕರ್ , ತಮಿಳುನಾಡಿನ ಪಿಆರ್ ಪಾಂಡೆ , ಬಿಹಾರ್ ಅರುಣ್ ಮಿಶ್ರಾ, ಹರಿಯಾಣದ ಲಕ್ವಿನ್ಧರ್ ಸಿಃಗ್, ಮಾತನಾಡಿದರು ರಾಜ್ಯ ಕಬ್ಬು ಬೆಳೆಗಾರ ಸಂಘದ 15ನೇ ವರ್ಷದ ಸ್ಮರಣ ಸಂಚಿಕೆ ,ಕಲ್ಮೇಶ ಎಲ್ಲದಗಿ ಬಿಡುಗಡೆ ಮಾಡಿದರು
ಐಎಎಸ್ ಪದವಿ ಪುರಸ್ಕಾರ ಮಾಡಿದ ರೈತರು ಕಲ್ಮೇಶ ಯಲ್ಲದಗಿ, ಬೆಳಗಾವಿ ಗಜೇಂದ್ರಸಿಂಗ್ ಕನಕಪುರ, ಶೈಲಜಾ ತುಮಕೂರು, ಅಂಗವಿಕಲ ರೈತ ಮಹೇಂದ್ರ ಮೈಸೂರ್, ಈಶ್ವರ್ ಮಿರಾಸಿ, ರವರಿಗೆ ಗೌರವಿಸಲಾಯಿತು, ರಾಜ್ಯ ಸರ್ಕಾರದ ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬು ಕುಮಾರ್ ರವರು ರೈತರ ಸಾಲ ಮನ್ನಾ ಅರ್ಜಿಗಳನ್ನ ಒತ್ತಯ್ಯ ಪತ್ರವನ್ನು ಸ್ವೀಕರಿಸಿ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು ಹತ್ತು ಸಾವಿರಕ್ಕೂ ಹೆಚ್ಚು ರೈತರು ಸಾಲಮನ್ನಾ ಕೋರಿಕೆ ಪತ್ರ ಸಲ್ಲಿಸಿದರು. ಗುಲ್ಬರ್ಗದ ರಮೇಶ್ ಹೂಗಾರ, ಕನ್ನಡ ಚಳುವಳಿ ಮುಖಂಡ ಗುರುದೇವ ನಾರಾಯಣ್ ಸೇರಿದಂತೆ ಅನೇಕ ಮುಖಂಡರು ಮಹಾಧಿವೇಶನದಲ್ಲಿ ಭಾಗವಹಿಸಿದ್ದರು.