ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲು ನಿಲ್ದಾಣದಲ್ಲಿ ಬೆಳಗಾವಿ–ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅಮೃತಸರ–ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಮತ್ತು ಅಜ್ನಿ (ನಾಗ್ಪುರ)–ಪುಣೆ ಮಾರ್ಗಗಳಲ್ಲಿನ ವಂದೇ ಭಾರತ್ ಸೇವೆಗಳನ್ನೂ ವರ್ಚುವಲ್ ಮೂಲಕ ಉದ್ಘಾಟಿಸಿದರು.
ಆಗಸ್ಟ್ 11ರಿಂದ ಸಂಚಾರ: ಬೆಳಗಾವಿಯಿಂದ (ರೈಲು ಸಂಖ್ಯೆ 26751) ಬೆಳಿಗ್ಗೆ 5.20ಕ್ಕೆ ಹೊರಡುವ ವಂದೇ ಭಾರತ್, ಧಾರವಾಡ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ತುಮಕೂರು, ಯಶವಂತಪುರ ನಿಲ್ದಾಣಗಳಲ್ಲಿ ನಿಲುಗಡೆ ಮಾಡಿಕೊಂಡು ಮಧ್ಯಾಹ್ನ 1.50ಕ್ಕೆ ಬೆಂಗಳೂರಿಗೆ ತಲುಪಲಿದೆ.
ಬೆಂಗಳೂರು ಕೆಎಸ್‌ಆರ್ ನಿಲ್ದಾಣದಿಂದ (ರೈಲು ಸಂಖ್ಯೆ 26752) ಮಧ್ಯಾಹ್ನ 2.20ಕ್ಕೆ ಹೊರಟು ರಾತ್ರಿ 10.40ಕ್ಕೆ ಬೆಳಗಾವಿಗೆ ತಲುಪಲಿದೆ. ಬುಧವಾರ ಹೊರತುಪಡಿಸಿ ವಾರದ ಆರು ದಿನ ಈ ರೈಲು ಸಂಚರಿಸಲಿದೆ. ಕಿತ್ತೂರು ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಭಾಗಗಳನ್ನು ರಾಜ್ಯ ರಾಜಧಾನಿಯೊಂದಿಗೆ ವೇಗವಾಗಿ ಸಂಪರ್ಕಿಸುವುದು ಇದರ ಪ್ರಮುಖ ಉದ್ದೇಶ.
ವೇಳಾಪಟ್ಟಿ (BEL–SBC ಮಾರ್ಗ): ಬೆಳಗಾವಿ – 5:20 | ಧಾರವಾಡ – 7:08 | ಹುಬ್ಬಳ್ಳಿ – 7:30 | ಹಾವೇರಿ – 8:35 | ದಾವಣಗೆರೆ – 9:25 | ತುಮಕೂರು – 12:15 | ಯಶವಂತಪುರ – 13:03 | ಬೆಂಗಳೂರು (ಕೆಎಸ್‌ಆರ್) – 13:50
ವೇಳಾಪಟ್ಟಿ (SBC–BEL ಮಾರ್ಗ): ಬೆಂಗಳೂರು – 14:20 | ಯಶವಂತಪುರ – 14:28 | ತುಮಕೂರು – 15:03 | ದಾವಣಗೆರೆ – 17:48 | ಹಾವೇರಿ – 18:48 | ಹುಬ್ಬಳ್ಳಿ – 20:00 | ಧಾರವಾಡ – 20:25 | ಬೆಳಗಾವಿ – 22:40
ಟಿಕೆಟ್ ದರ:
-
ಬೆಂಗಳೂರು–ಬೆಳಗಾವಿ: CC – 1118 | EC – 2279
-
ಬೆಂಗಳೂರು–ಧಾರವಾಡ: CC – 914 | EC – 1863
-
ಬೆಂಗಳೂರು–ಹುಬ್ಬಳ್ಳಿ: CC – 885 | EC – 1802
-
ಬೆಂಗಳೂರು–ಹಾವೇರಿ: CC – 778 | EC – 1588
-
ಬೆಂಗಳೂರು–ದಾವಣಗೆರೆ: CC – 676 | EC – 1379
-
ಬೆಂಗಳೂರು–ತುಮಕೂರು: CC – 298 | EC – 615
-
ಬೆಂಗಳೂರು–ಯಶವಂತಪುರ: CC – 242 | EC – 503
ಅಧಿಕಾರಿಗಳ ಪ್ರಕಾರ, ಹಳೆಯ ವಂದೇ ಭಾರತ್ ಸೇವೆಗಳಿಗೆ ಹೋಲಿಸಿದರೆ ಈ ಮಾರ್ಗದ ದರಗಳು ತಳಮಟ್ಟದಲ್ಲಿದ್ದು, ವೇಗ ಮತ್ತು ಸಮಯ ಉಳಿತಾಯ ಎರಡನ್ನೂ ಒದಗಿಸಲಿವೆ.