ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಬೆಡ್ ಮಾಫಿಯಾವನ್ನು ಬೇಧಿಸಿರುವ ಸಂಸದ ತೇಜಸ್ವಿ ಸೂರ್ಯ ಇದೀಗ ಬಿಜೆಪಿಯಲ್ಲಿನ ಹೀರೋ. ಜನಪ್ರತಿನಿಧಿಯಾಗಿದ್ದರೂ ಹೋರಾಟಗಾರನಾಗಿ ಅಖಾಡದಲ್ಲಿ ಗಮನಸೆಳೆದ ತೇಜಸ್ವಿ ಸೂರ್ಯ ಅವರಿಗೆ ಯುವಜನ ಪಾಳಯದಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ. ಆದರೆ ಈ ವಿಚಾರ ಬಿಜೆಪಿಯೊಳಗೆ ವ್ತತಿರಿಕ್ತ ಸಂಚಲನ ಸೃಷ್ಟಿಯಾಗಿದೆ. ಇದು ಹೈವೋಲ್ಟೇಜ್ ಬೆಳವಣಿಗೆಯ ಪ್ರತಿಧ್ವನಿ ಎಂಬ ಮಾತುಗಳೂ ಕೇಳಿಬರುತ್ತಿದೆ.
ಯಡಿಯೂರಪ್ಪ ಸರ್ಕಾರದ ವಿರುದ್ದವೇ ಸಿಡಿದೆದ್ದರೇ..?
ಈ ವರೆಗೂ ಆಡಳಿತಾತ್ಮಕ ಲೋಪಗಳನ್ನು ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಬೇಕೇ ಹೊರತು ತಮ್ಮ ಪಕ್ಷದ ಸರ್ಕಾರಕ್ಕೆ ಕೆಟ್ಟ ಹೆಸರು ಬರುವ ರೀತಿ ಆರೋಪ ಮಾಡಬಾರದೆಂಬುದು ನಾಯಕರಿಗೆ ಬಿಜೆಪಿ ವರಿಷ್ಠರ ಕಿವಿಮಾತು. ಆದರೆ ಬೆಂಗಳೂರಿನ ‘ಹಾಸಿಗೆ ಕರ್ಮಕಾಂಡ’ ವಿಚಾರದಲ್ಲಿ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಸಂಸದ ತೇಜಸ್ವಿ ಸೂರ್ಯ ಅವರು ಆಕ್ರೋಶ ವ್ಯಕ್ತಪಡಿಸಿದ ವೈಖರಿ ಬಿಜೆಪಿ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ.
ಹಗರಣ ಕುರಿತು ಸಿಎಂಗೆ ದೂರು ನೀಡಿ ತಪ್ಪಿತಸ್ಥರ ವಿರುದ್ದ ಯಾವುದೇ ರೀತಿಯ ತನಿಖೆ ನಡೆಸಲು ಸಾಧ್ಯವಿದ್ದರೂ ಮೂವರು ಶಾಸಕರ ಉಪಸ್ಥಿತಿಯಲ್ಲಿ ತೇಜಸ್ವಿ ಸೂರ್ಯ ಅವರು ನಡೆಸಿದ ಸುದ್ದಿಗೋಷ್ಠಿ ನಡೆಸಿದ್ದೇಕೆ ಎಂಬ ಬಗ್ಗೆ ಬಿಜೆಪಿ ಪಾಳಯದಲ್ಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿಎಂಗೆ ದೂರು ನೀಡಿ, ಕ್ರಮಕ್ಕೆ ಸೂಚಿಸಿದ ನಂತರ ಮಾಧ್ಯಮಗಳೆದುರು ಸರ್ಕಾರದ ಲೋಪ ಎಂಬಂತೆ ಸನ್ನಿವೇಶವನ್ನು ಬೊಟ್ಟು ಮಾಡಿರುವುದು ಸರಿಯೇ ಎಂಬುದು ಬಿಎಸ್‌ವೈ ಆಪ್ತ ವಲಯದ ನಾಯಕರ ಅಸಮಾಧಾನದ ಮಾತುಗಳು.
ಈ ನಡುವೆ, ‘ನಮ್ಮದೇ ಸರ್ಕಾರವಿದ್ದರೂ ಹೋರಾಟ ಅನಿವಾರ್ಯ’ ಎಂಬ ಹೇಳಿಕೆ ಹಲವಾರು ರೀತಿಯ ವಿಶ್ಲೇಷಣೆಗೆ ಎಡೆಮಾಡಿಕೊಟ್ಟಿದೆ ಎಂಬುದು ಅನೇಕರ ಅಭಿಪ್ರಾಯ.
ಪ್ರತಿಪಕ್ಷಗಳಿಂದಲೂ ಅಭಿನಂದನೆ
ಇದೇ ವೇಳೆ ಪ್ರತಿಪಕ್ಷ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ತೇಜಸ್ವಿ ಸೂರ್ಯ ಅವರ ನಡೆಯನ್ನು ಶ್ಲಾಘಿಸಿದ್ದಾರೆ. ತೇಜಸ್ವಿ ಸೂರ್ಯ ಅವರನ್ನು ಅಭಿನಂದಿಸಿ, ಬಿಜೆಪಿ ಸರ್ಕಾರದ್ದೇ ಹಗರಣ ಎಂಬಂತೆ ಡಿಕೆಶಿ ವಿಶ್ಲೇಷಣೆ ಮಾಡಿದ್ದಾರೆ.
I congratulate MP Tejasvi Surya, MLAs Satish Reddy, Ravi Subramanya & Uday Garudachar for EXPOSING CORRUPTION in bed allocation by their party govt & corporation.
Under whose control is BBMP? They should immediately name the BJP Minister responsible for people suffering so much.
— DK Shivakumar (@DKShivakumar) May 4, 2021
ಇದೇ ವೇಳೆ ಟ್ವೀಟ್ ಮಾಡಿರುವ ಪ್ರದೇಶ ಕಾಂಗ್ರೆಸ್, ತೇಜಸ್ವಿ ಸೂರ್ಯ ಅವರು ಸಿಎಂ ಅವರ ಭ್ರಷ್ಟಾಚಾರವನ್ನೇ ಬಯಲು ಮಾಡಿದ್ದಾರೆ ಎಂದು ಬೊಟ್ಟು ಮಾಡಿದೆ. ‘ಸಂಸದ ತೇಜಸ್ವಿ ಸೂರ್ಯ ಅವರ ಸಂಬಂಧಿ ಶಾಸಕ ಮತ್ತು ಮತ್ತಿಬ್ಬರು ಶಾಸಕರು ಆಸ್ಪತ್ರೆಯಲ್ಲಿ ಹಾಸಿಗೆ ಹಗರಣದ ಬಗ್ಗೆ ಆರೋಪಿಸಿದ್ದಾರೆ. ಬಿಬಿಎಂಪಿ, ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ತೇಜಸ್ವಿ ಅವರು ಸಿಎಂ ಯಡಿಯೂರಪ್ಪ ಹಾಗೂ ಸಚಿವರ ವಿರುದ್ಧ ಭ್ರಷ್ಟಾಚಾರ ಹಾಗೂ ಪರೋಕ್ಷ ಹತ್ಯೆ ಆರೋಪ ಮಾಡಿದ್ದಾರೆ. ಎಂತಹ ನಾಟಕ!’ ಎಂದು ವ್ಯಂಗ್ಯವಾಡಿದೆ.
ಸಂಸದ @Tejasvi_Surya , ಅವರ ಸಂಬಂಧಿ ಶಾಸಕ ಮತ್ತು ಮತ್ತಿಬ್ಬರು ಶಾಸಕರು ಇಂದು ಆಸ್ಪತ್ರೆಯಲ್ಲಿ ಹಾಸಿಗೆ ಹಗರಣದ ಬಗ್ಗೆ ಆರೋಪಿಸಿದ್ದಾರೆ.
ಬಿಬಿಎಂಪಿ, ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ.
ತೇಜಸ್ವಿ ಅವರು ಸಿಎಂ ಯಡಿಯೂರಪ್ಪ ಹಾಗೂ ಸಚಿವರ ವಿರುದ್ಧ ಭ್ರಷ್ಟಾಚಾರ ಹಾಗೂ ಪರೋಕ್ಷ ಹತ್ಯೆ ಆರೋಪ ಮಾಡಿದ್ದಾರೆ. ಎಂತಹ ನಾಟಕ! https://t.co/B8LNsBsTh8
— Karnataka Congress (@INCKarnataka) May 4, 2021
ಸಿದ್ದರಾಮಯ್ಯ ಕೂಡಾ ಟ್ವೀಟ್ ಮಾಡಿ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ತೇಜಸ್ವಿ ಸೂರ್ಯ, ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ ಅವರೇ, ಕೋವಿಡ್ ನಿರ್ವಹಣೆಯ ಗುಪ್ತ ಕಾರ್ಯಾಚರಣೆ ನಡೆಸಬೇಕಾಗಿರುವುದು BBMPಯ ಅಧಿಕಾರಿಗಳ ವಿರುದ್ಧವಲ್ಲ, ವಿಧಾನಸೌಧದಲ್ಲಿ ಕೂತಿರುವ ಮುಖ್ಯಮಂತ್ರಿ, ಸಚಿವರು ಮತ್ತು ಬಿಜೆಪಿ ಶಾಸಕರು,ಸಂಸದರ ವಿರುದ್ಧ. ಸಣ್ಣಮಿಕಗಳನ್ನು ಹಿಡಿದಿರುವುದು ದೊಡ್ಡ ತಿಮಿಂಗಲಗಳ ರಕ್ಷಣೆಗಾ?’ ಎಂದು ಪ್ರಶ್ನಿಸಿದ್ದಾರೆ.
.@Tejasvi_Surya, ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ ಅವರೇ,
ಕೋವಿಡ್ ನಿರ್ವಹಣೆಯ ಗುಪ್ತ ಕಾರ್ಯಾಚರಣೆ ನಡೆಸಬೇಕಾಗಿರುವುದು BBMPಯ ಅಧಿಕಾರಿಗಳ ವಿರುದ್ಧವಲ್ಲ, ವಿಧಾನಸೌಧದಲ್ಲಿ ಕೂತಿರುವ ಮುಖ್ಯಮಂತ್ರಿ, ಸಚಿವರು ಮತ್ತು @BJP4Karnataka ಶಾಸಕರು,ಸಂಸದರ ವಿರುದ್ಧ. ಸಣ್ಣಮಿಕಗಳನ್ನು ಹಿಡಿದಿರುವುದು ದೊಡ್ಡ ತಿಮಿಂಗಲಗಳ ರಕ್ಷಣೆಗಾ?1/11— Siddaramaiah (@siddaramaiah) May 5, 2021