ಬೆಂಗಳೂರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಡಿ.ಆರ್.ಡಿ.ಒ. ಮತ್ತು ರಕ್ಷಣಾ ಇಲಾಖೆಯ ಜೈವಿಕ ಇಂಜಿನಿಯರಿಂಗ್ ಮತ್ತು ಎಲೆಕ್ಟ್ರೋ ಮೆಡಿಕಲ್ ಪ್ರಯೋಗಾಲಯ ‘ಡೆಬೆಲ್’ ಸಂಸ್ಥೆ ವಿಧಾನಸೌಧದಲ್ಲಿ ಆಯೋಜಿಸಿರುವ ‘ಸಶಸ್ತ್ರ ಪಡೆಗಳಿಗೆ ಪೂರೈಸುವ ಆಹಾರ, ಜೀವರಕ್ಷಕ ಸಾಧನಗಳ ವಸ್ತುಪ್ರದರ್ಶನ’ ವನ್ನು ವೀಕ್ಷಿಸಿದ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು, ರಕ್ಷಣಾ ಇಲಾಖೆಯ ಬಳಸುತ್ತಿರುವ ವಿನೂತನ ತಂತ್ರಜ್ಞಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಕ್ಷಣಾ ಇಲಾಖೆಯು ಇತ್ತೀಚಿನ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಸಹಾಯದಿಂದ ಸುಧಾರಿತ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಮುಂದಾಗಿದ್ದು, ಬಿಬಿಎಂಪಿ ವ್ಯಾಪ್ತಿಯ ವಿಕ್ಟೋರಿಯಾ, ಬೌರಿಂಗ್ ಮತ್ತು ಸಿವಿ ರಾಮನ್ ನಗರದ ಆಸ್ಪತ್ರೆಗಳಲ್ಲಿ ಈ ಸಶಸ್ತ್ರ ಪಡೆಗಳಿಂದ ನಿರ್ಮಾಣವಾದ ಆಮ್ಲಜನಕ ಉತ್ಪಾದನೆ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ರಾಕೇಶ್ ಸಿಂಗ್ ತಿಳಿಸಿದರು.
ವಸ್ತು ಪ್ರದರ್ಶನದಲ್ಲಿ ಡಿ ಆರ್ ಡಿ ಒ, ಡಿ ಎಫ್ ಆರ್ ಎಲ್ ಮತ್ತು ಡೆಬೆಲ್ ಸಂಸ್ಥೆಯ ಅಧಿಕಾರಿಗಳು, ರಕ್ಷಣಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.