ಮಂಗಳೂರು: ಬಿಜೆಪಿ ಮುಖಂಡನ ಮೇಲೆ ಕೇಸರಿ ಕಾರ್ಯಕರ್ತರೆಂದು ಹೇಳಿಕೊಂಡ ಗುಂಪೊಂದು ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣ ಬಂಟ್ವಾಳ ಬಳಿ ನಡೆದಿದೆ.
ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗಬೆಳ್ಳೂರು ನಿವಾಸಿಯಾಗಿರುವ ಬಿಜೆಪಿ ಮುಖಂಡ ಪ್ರಕಾಶ್ ಬೆಳ್ಳೂರು ಮೇಲೆ ಈ ದಾಳಿ ನಡೆದಿದೆ. ಬಿಜೆಪಿ ಅಮ್ಟಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಕಾಶ್ ಬೆಳ್ಳೂರು ಅವರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿನ ಫೋಸ್ಟ್ ವಿಚಾರದಲ್ಲಿ ಯುವಕರ ಗುಂಪು ಜಗಳಕ್ಕಿಳಿದಿದೆ. ಈ ವಿಚಾರವನ್ನು ಮುಂದಿಟ್ಟು ನಿತಿನ್ ಬಡಗಬೆಳ್ಳೂರು ನಿಶಾಂತ್ ಬಡಗಬೆಳ್ಳೂರು ಪವನ್ ಕುಮ್ಡೇಲ್ ಹಾಗೂ ಇನ್ನಿತರರು ಮಾರಕಾಯುಧಗಳಿಂದ ಪ್ರಕಾಶ್ ಬೆಳ್ಳೂರು ಮೇಲೆ ದಾಳಿ ಮಾಡಿದ್ದರೆ ಎನ್ಬಲಾಗಿದೆ.
ಈ ಆರೋಪಿಗಳು ಭಜರಂಗದಳದೊಂದಿಗೆ ಗುರುತಿಸಿಕೊಂಡಿದ್ದಾರೆಂದು ಸ್ಥಳೀಯರು ಹೇಳಿಕೊಂಡಿದ್ದಾರೆ. ಈ ಆರೋಪಿಗಳು ಬಿಜೆಪಿ ಮುಖಂಡ ಪ್ರಕಾಶ್ ಬೆಳ್ಳೂರು ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಕೃತ್ಯವನ್ನು ತಡೆಯಲು ಮುಂದಾದ ಅವರ ತಾಯಿ ಮತ್ತು ಅಣ್ಣನಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಮಾರಣಾಂತಿಕವಾಗಿ ಹಲ್ಲೆಗೊಳಗಾಗಿರುವ ಪ್ರಕಾಶ್ ಬೆಳ್ಳೂರು ಅವರನ್ನು ಸ್ಥಳೀಯರು ಬಂಟ್ವಾಳದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕೃತ್ಯದ ಕುರಿತಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.