ಬೆಂಗಳೂರು: ಲೋಕಸಭಾ ಚುನಾವಣಾ ರಾಜಕೀಯ ಪಕ್ಷಗಳ ಭರ್ಜರಿ ಕಾದಾಟಕ್ಕೆ ಸಾಕ್ಷಿಯಾಗುತ್ತಿದೆ. ಬಿಜೆಪಿಯ ನಾಗಾಲೋಟಕ್ಕೆ ಬ್ರೇಕ್ ಹಾಕಲು ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್ ಪಕ್ಷ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಕಸಿದುಕೊಳ್ಳುವ ಪ್ರಯತ್ನದಲ್ಲಿದೆ. ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರು ನಿರಂತರ ಪ್ರಚಾರ ಕೈಗೊಂಡಿದ್ದು, ಅವರು ನಡೆಸುತ್ತಿರುವ ಪ್ರಚಾರ ಸಭೆ, ರೋಡ್ ಶೋಗಳಲ್ಲಿ ಜನಸಾಗರವೇ ಜಮಾಯಿಸುತ್ತಿದೆ.

ಸೌಮ್ಯರೆಡ್ಡಿಗೆ ಬಲಿಜ ಸಂಘದ ಬೆಂಬಲ:
ಈ ನಡುವೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಅವರಿಗೆ ಕರ್ನಾಟಕ ರಾಜ್ಯ ಬಲಿಜ ಸಂಘದ ಬೆಂಬಲ ಘೋಷಿಸಿದೆ. 20-4- 2024 ರಂದು ವಿಲ್ಸನ್ ಗಾರ್ಡನ್ ಕ್ಲಬ್ ನಲ್ಲಿ ಕರ್ನಾಟಕ ರಾಜ್ಯ ಬಲಿಜ ಸಂಘ ಹಾಗೂ ಕರ್ನಾಟಕ ರಾಜ್ಯ ಬಲಿಜ ಸಂಘಗಳ ಒಕ್ಕೂಟದ ಅಧ್ಯಕ್ಷ ಶ್ರೀ ಟಿ ವೇಣುಗೋಪಾಲ್ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಬಲಿಜ ಜನಾಂಗದ ಪ್ರಮುಖರದ ಮಮತ ದೇವರಾಜ್, ಫಿಲಂ ಚೇಂಬರ್ ನ ನರಸಿಂಹಲು, ವಿಜಯನಗರದ ಸಂಜೀವಪ್ಪ, ಬನಗಿರಿ ನಗರದ ಉದ್ಯಮಿ UD ಮಂಜಣ್ಣ ಹಾಗೂ ವೀರೇಂದ್ರ ಕುಮಾರ್, ಜಯನಗರದ ಲಕ್ಷ್ಮಣ್, ಮಿಲ್ಸನ್ ಗಾರ್ಡನ್ ರವಿಚಂದ್ರ, ರಾಜಶೇಖರ್, ಪ್ರಭಾಕರ್, ಲಕ್ಕಸಂದ್ರ ದಿಂದ ಶಾಮಣ್ಣ, ಹೊಸ ರೋಡ್ SLV ಮುನಿರಾಜು, ಬೊಮ್ಮನಹಳ್ಳಿ ಪ್ಯಾರ ಡೈಸ್ ಸ್ಕೂಲ್ ಮಂಜುನಾಥ್, ಮಡಿವಾಳದ ಸಂಜೀವ, BTM ಕ್ಷೇತ್ರದಿಂದ ಚಂದ್ರಶೇಖರ್, ಬಸವನಗುಡಿ ಕ್ಷೇತ್ರದ P G ಶ್ರೀನಿವಾಸಲು ಹಾಗೂ ರವೀಂದ್ರ, ಹಾಗೂ ಇನ್ನೂ ಅನೇಕ ಬಲಿಜ ಒಕ್ಕೂಟದ ಪ್ರಮುಖರು ಗಳು ಭಾಗವಹಿಸಿದ್ದ ಸಭೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ದಿಸಿರುವ ಸೌಮ್ಯ ರೆಡ್ಡಿಯವರನ್ನು ಬೆಂಬಲಿಸಲು ತೀರ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾನ್ಯ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ರವರು ಸಹ ಭಾಗವಹಿಸಿ ಧನ್ಯವಾದ ಸಲ್ಲಿಸಿದರು.

ಯಾದವ ಸಮುದಾಯದ ಬೆಂಬಲ:
ಇದೇ ವೇಳೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಅವರಿಗೆ ಅಖಿಲ ಭಾರತ ಯಾದವ ಸಂಘಟನೆ ಮತ್ತು ಕರ್ನಾಟಕ ರಾಜ್ಯ ಯಾದವ ಸಮುದಾಯದ ಬೆಂಬಲ ಘೋಷಣೆ ಮಾಡಿದೆ. 20-4- 2024 ರಂದು ನಡೆದ ಸಭೆಯಲ್ಲಿ ಅಖಿಲ ಭಾರತ ಯಾದವ ಮಹಾಸಭಾ ಉಪಾಧ್ಯಕ್ಷರು ವಾಸುದೇವಲು ಯಾದವ್, ಕರ್ನಾಟಕ ರಾಜ್ಯ ಯಾದವ ಸಂಘದ ಅಧ್ಯಕ್ಷ ಡಿ.ಟಿ ಶ್ರೀನಿವಾಸ, ಎಂ.ಎಲ್.ಸಿ ನಾಗರಾಜ ಯಾದವ್, , ಕರ್ನಾಟಕ ಯಾದವ ಸಂಘದ ಮಾಜಿ ಅಧ್ಯಕ್ಷ ಲಕ್ಷ್ಮಿಪತಿ, ಮಾಜಿ ಕಾರ್ಪೋರೇಟರ್ ಗಳಾದ ಜಯರಾಂ, ವಿಜಯನಗರ, ಶ್ರೀನಿವಾಸ, ಅಗ್ರಹಾರ ದಾಸರಹಳ್ಳಿ, ಕೋಕಿಲ ರಾಮಕೃಷ್ಣ ,ಕೋರಮಂಗಲ, ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ಕ್ಷೇತ್ರಗಳ ಯಾದವ/ಗೊಲ್ಲ ಸಮುದಾಯದ ಮುಖಂಡರುಗಳು ಸಭೆಯಲ್ಲಿ ಭಾಗವಹಿಸಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರಿಗೆ ಸಮುದಾಯವು ಒಮ್ಮತದಿಂದ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಘೋಷಿಸಿದರು. ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾದವ ಸಮುದಾಯದ ಸುಮಾರು 50 ಸಾವಿರಕ್ಕೂ ಹೆಚ್ಚು ಮತದಾರರಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನೇ ಬೆಂಬಲಿಸುವುದಾಗಿ ಸಚಿವರಾದ ರಾಮಲಿಂಗಾರೆಡ್ಡಿ, ಹೆಚ್‌ಎಂ. ರೇವಣ್ಣ ಹಾಗೂ ಹಿರಿಯ ನಾಯಕ ಉಗ್ರಪ್ಪ ಸಮ್ಮುಖದಲ್ಲಿ ತಿಳಿಸಿದರು.

ಗಾಣಿಗರ ಒಕ್ಕೂಟದ ಸಂಘ ಬೆಂಬಲ:
ಇನ್ನೊಂದೆಡೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಗಾಣಿಗರ ಒಕ್ಕೂಟ ಸಂಘ ಕೂಡಾ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿಗೆ ಬೆಂಬಲ ಘೋಷಿಸಿದೆ. ಬೆಂಗಳೂರಿನ ಜಯನಗರದಲ್ಲಿ ನಡೆದ ಸಮುದಾಯದ ಮುಖಂಡರ ಸಭೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸೇರುವ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಗಾಣಿಗ ಸಮುದಾಯದ ಬಂಧುಗಳು ಪಾಲ್ಗೊಂಡಿದ್ದರು.
ಈ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಸೌಮ್ಯ ರೆಡ್ಡಿ, ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ, ಎಸ್.ಎಲ್.ಎನ್.ಧರ್ಮ ಸಂಸ್ಥೆಯ ಅಧ್ಯಕ್ಷರಾದ ಎಸ್.ಸುರೇಶ್, ಕೆಪಿಸಿಸಿ ನಾಯಕರಾದ ಡಿ.ವಿ.ಲಕ್ಷ್ಮಿ, ವಿ.ಆರ್. ಸುದರ್ಶನ್, ಎಂ ಎಸ್ ಮುನಿರಾಜು, ವೇಣುಗೋಪಾಲ್ ಹಾಗೂ ಅನೇಕ ಸಮುದಾಯದ ಮುಖಂಡರು ಭಾಗವಹಿಸಿದ್ದರು. ಸಭೆಯಲ್ಲಿ ನೆರೆದಿದ್ದ ಗಾಣಿಗ ಸಮುದಾಯದ ಬಂಧುಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.






















































