ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಬಂಡುಕೋರರು ರೈಲನ್ನು ಅಪಹರಿಸಿದ್ದ ನಂತರ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿದೆ. ಸೇನಾಕಾರ್ಯಾಚರಣೆಯಲ್ಲಿ ಒತ್ತೆಯಾಳುಗಳನ್ನು ಬಿಡಿಲೊಂಡ ಬಳಿಕ ಬಲೂಚ್ ಬಂಡುಕೋರರು ಸೇಡು ತೀರಿಸುತ್ತಿದ್ದಾರೆ.
ಬಲೂಚಿಸ್ತಾನದ ರಾಜಕೀಯ ಕೈದಿಗಳ ಬಿಡುಗಡೆಗಾಗಿ ಪಾಕಿಸ್ತಾನಕ್ಕೆ 48 ಗಂಟೆಗಳ ಗಡುವು ನೀಡಿದ್ದ ಬಲೂಚ್ ಲಿಬರೇಶನ್ ಆರ್ಮಿ, ಸರ್ಕಾರದಿಂದ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಒತ್ತೆಯಾಳಾಗಿರಿಸಿಕೊಂಡಿದ್ದ 214 ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಬಲೂಚ್ ಲಿಬರೇಶನ್ ಆರ್ಮಿ ಹೇಳಿಕೊಂಡಿದೆ.
ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸಬೇಕೆಂದು ಪ್ರತ್ಯೇಕತಾವಾದಿ ಬಲೂಚ್ ಲಿಬರೇಶನ್ ಆರ್ಮಿ ಒತ್ತಾಯಿಸುತ್ತಿದೆ. ಮಂಗಳವಾರ ರೈಲ್ವೆ ಹಳಿಯನ್ನು ಸ್ಫೋಟಿಸಿ ರೈಲನ್ನು ಅಪಹರಿಸಿತ್ತು. ರೈಲಿನಲ್ಲಿದ್ದ 400ಕ್ಕೂ ಹೆಚ್ಚು ಪ್ರಯಾಣಿಕರನ್ನು ಸೇನೆ ಕಾರ್ಯಾಚರಣೆ ನಡೆಸಿ ಬಿಡುಗಡೆ ಮಾಡಿತ್ತು. ಆ ಸಂದರ್ಭದಲ್ಲಿ ಹಲವು ಪಾಕ್ ಸೈಕೀಕರನ್ನು ಬಲೂಚ್ ಲಿಬರೇಶನ್ ಆರ್ಮಿ ಬಂಡೂಕೋರರು ಅಪಹರಿಸಿದ್ದರು. ಇದೀಗ ಈ ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಬಂಡೂಕೋರರು ಹೇಳಿದ್ದಾರಾದರೂ ಪಾಕ್ ಆಡಳಿತ ತಳ್ಳಿಹಾಕಿದೆ.