ದೆಹಲಿ: ಅಲೋಪತಿ ಔಷಧೀಯ ಪದ್ದತಿ ಕುರಿತು ಯೋಗ ಗುರು ಬಾಬಾ ರಾಮ್‌ದೇವ್ ನೀಡಿದ್ದಾರೆನ್ನಲಾದ ಹೇಲಿಕೆ ಬಗ್ಗೆ ಐಎಂಎ ಗರಂ ಆಗಿದೆ. ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಅಲೋಪಥಿಕ್ ಔಷಧಿಗಳಿಂದಾಗಿ ಲಕ್ಷಾಂತರ ಜನರು ಸತ್ತಿದ್ದಾರೆ. ಇದು ಅವಿವೇಕಿಗಳ ವಿಜ್ಞಾನ ಎಂದು ರಾಮ್‌ದೇವ್ ಹೇಳಿದ್ದರೆನ್ನಲಾಗಿದ್ದು, ಇದನ್ನು ಆಕ್ಷೇಪಿಸಿರುವ ಐಎಂಎ (ಭಾರತೀಯ ವೈದ್ಯಕೀಯ ಸಂಘ) ಬಾಬಾ ರಾಮದೇವ್ ವಿರುದ್ಧ 1000 ಕೋಟಿ ರೂ. ಮಾನಹಾನಿ ಕೇಸ್‌ಗೆಮುಂದಾಗಿದೆ. ಈ ವಿವಾದ ಕುರಿತಂತೆ ಪೊಲೀಸರಿಗೂ ದೂರು ನೀಡಲಾಗಿದೆ.
ಈ ಬೆಳವಣಿಗೆಹಳ ನಡುವೆಯೇ ಬಾಬಾ ರಾಮ್ ದೇವ್ ಅವರ ಮತ್ತೊಂದು ಹೇಳಿಕೆಯ ವೀಡಿಯೋ ಸಂಚಲನ ಸೃಷ್ಟಿಸಿದೆ. ಯಾವುದೇ ಸಮರಕ್ಕೂ ತಾವು ಜಗ್ಗಲ್ಲ ಎಂಬ ಸಂದೇಶ ಇದಾಗಿದೆ ಎಂದೇ ಬಣ್ಣಿಸಲಾಗುತ್ತಿದೆ.
“Not even their father can arrest Ramdev haha”- Baba Ramdev himself says.
No wonder all the illegal dealings being carried out smoothly.
— Saurav Das (@SauravDassss) May 26, 2021
ಏನಿದು ವೀಡಿಯೋ..?
ಮಾನಹಾನಿ ಕೇಸ್ ಮತ್ತು ಬಂಧಿಸಬೇಕೆಂಬ ಹೇಳಿಕೆಗಳ ಬಗ್ಗೆ ಮಾತನಾಡಿರುವ ಬಾಬಾ ರಾಮ್‌ದೇವ್, ‘ಅರೆಸ್ಟ್ ತೋ ಉನ್ಕಾ ಬಾಪ್ ಭೀ ನಹಿ ಕರ್ ಸಕ್ತ ಸ್ವಾಮಿ ರಾಮದೇವ್ ಕೊ” (ನನ್ನನ್ನು, ಸ್ವಾಮಿ ಬಾಬಾ ರಾಮ್‌ವೇವ್‌ನನ್ನು ಬಂಧಿಸಲು ಅವರಲ್ಲ, ಅವರ ಅಪ್ಪನಿಂದಲೂ ಸಾಧ್ಯವಿಲ್ಲ) ಎಂದು ನಸುನಗುತ್ತಾ ಹೇಳಿರುವ ವೀಡಿಯೋ ಇದಾಗಿದೆ.
“ಕೇವಲ ಸದ್ದು ಮಾಡುತ್ತಾರೆಯೇ ಹೊರತು, ನನ್ನನ್ನು ಬಂಧಿಸಲು ಸಾಧ್ಯವಿಲ್ಲ. ದಿನಕ್ಕೊಂದು ಹ್ಯಾಟ್‌ಟ್ಯಾಗ್ ಟ್ರೆಂಡ್ ಮಾಡುತ್ತಾರೆಯೇ ಹೊರತು ಬೇರೇನೂ ಮಾಡಲು ಅವರಿಂದ ಸಾಧ್ಯವಿಲ್ಲ’ ಎಂದೂ ಬಾಬಾ ರಾಮ್‌ದೇವ್ ಹೇಳಿರುವ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋ ಭಾರೀ ಚರ್ಚೆಗೂ ಕಾರಣವಾಗಿದೆ.